ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಿಐಟಿಯು ಕಾರ್ಯಕರ್ತರ ಮೆರವಣಿಗೆ

Mainashree
Updated On : 2 May 2014, 12:54 pm

ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನ ಆಚರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಸಿಐಟಿಯು ವತಿಯಿಂದ ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ವಿವಿಧ  ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.ಕಾರ್ಮಿಕರ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಅರಿವು ಮೂಡಿಸಿದರು.
ನಂತರ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಶ್
ಮಾತನಾಡಿ, 1991ರಿಂದ ಸರ್ಕಾರಗಳು ಜಾರಿಗೊಳಿಸಿರುವ ನವ ಉದಾರವಾದಿ ಆರ್ಥಿಕ ನೀತಿಗಳ ಪರಿಣಾಮವಾಗಿ ಸಂಘಟಿತ ಉದ್ದಿಮೆ ವಲಯದಲ್ಲಿ ಆಗುತ್ತಿರುವ ನಿವ್ವಳ ಮೌಲ್ಯ ಸೇರಿಕೆಯಲ್ಲಿ ವೇತನಗಳ ಪಾಲು ಜಗತ್ತಿನಲ್ಲೇ ಅತ್ಯಂತ ಕಡಿಮೆ ಭಾರತದಲ್ಲಿದೆ. 1981ರಲ್ಲಿ ಶೇ.30.36 ವಾಗಿದ್ದ ವೇತನಗಳ ಪಾಲು 2007ರಲ್ಲಿ ಶೇ.10.61 ಕ್ಕೆ ಇಳಿದಿದೆ. 2008-09 ರಿಂದ 2012-13 ರ ನಾಲ್ಕು ವರ್ಷಗಳ ಅವಧಿಯಲ್ಲಿ ಗುತ್ತಿಗೆ ಕಾರ್ಮಿಕರ ಸಂಖ್ಯೆಯು ಶೇ.22ರಿಂದ 39ಕ್ಕೆ ಹೆಚ್ಚಾಳವಾಗಿದೆ. ಬೃಹತ್ ಕಂಪನಿಗಳಲ್ಲಿ ಶೇ.50 ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಇದ್ದಾರೆ.
ಯುವಜನರು ನಿರುದ್ಯೋಗಿಗಳಾಗಿದ್ದಾರೆ. ಶಿಕ್ಷಣ-ಆರೋಗ್ಯ ಸಿರಿವಂತರ ಸ್ವತ್ತಾಗಿದೆ. ಅಸಂಘಟಿತ ಕಾರ್ಮಿಕರ ಸಮಾಜಿಕ ಭದ್ರತೆಗೆ ಹಣ ನೀಡದ ಸರ್ಕಾರಗಳು ಈ ದೇಶದ ಬಂಡವಾಳಗಾರರಿಗೆ ಕಳೆದ ನಾಲ್ಕು ವರ್ಷಗಳಲ್ಲಿ ರು.24 ಲಕ್ಷ ಕೋಟಿ ತೆರಿಗೆ ಮುಂತಾದ ರಿಯಾಯಿತಿ ನೀಡಿದೆ. ಪರಿಣಾಮವಾಗಿ ದೇಶದಲ್ಲಿನ ಶತಕೋಟಿ ಅಧಿಪತಿಗಳ ಸಂಖ್ಯೆಯು 13 ರಿಂದ 56 ಕ್ಕೆ ಹೆಚ್ಚಳವಾಗಿದೆ. ಆದರೆ ದೇಶದಲ್ಲಿನ ಶೇ.80 ಜನತೆ ದಿನಕ್ಕೆ ರು. 20 ಖರ್ಚು ಮಾಡಲು ಸಾದ್ಯವಿಲ್ಲದ ಆಸಹಾಯಕ ಪರಿಸ್ಥಿತಿಯಲ್ಲಿದ್ದಾರೆ ಎಂದು ಅಭಿಪ್ರಾಯಪಟ್ಟರು.  ಸಿಐಟಿಯು ನ ವಿ.ಸುಕುಮಾರ್, ನಾನಾ ಸಂಘಟನೆಗಳ ಮುಖಂಡರಾದ ಮಂಜುನಾಥ್, ಹೊನ್ನೇಗೌಡ, ಸುರೇಶ್, ಶಿವಣ್ಣ, ಪ್ರಕಾಶ್, ಪುಷ್ಪಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement