ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಪ್ರಚಲಿತ ವಿದ್ಯಮಾನದ ಕಡೆ ಗಮನ ಹರಿಸಿ'

Mainashree
Updated On : 2 May 2014, 11:14 am

ಬೇಲೂರು: ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನದ ಜೊತೆಗೆ ವಿಶ್ವದ ಆಗು ಹೋಗುಗಳ  ಬಗೆಗಿನ ಚಿಂತನೆಗಳಿಗೆ ಹೆಚ್ಚು ಮಹತ್ವ ನೀಡಬೇಕು ಎಂದು ಮೈಸೂರು ಮಾನಸ ಗಂಗೋತ್ರಿ  ಪ್ರಸಾರಾಂಗ ವಿಭಾಗದ ನಿರ್ದೇಶಕ ಹಾಗೂ ಸಾಹಿತಿ ಪ್ರೊ.ಸಿ. ನಾಗಣ್ಣ ತಿಳಿಸಿದರು.
ಪಟ್ಟಣದ ಶ್ರೀಶಿವಕುಮಾರ ಸಮುದಾಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವೈಡಿಡಿ ಪ್ರಥಮ ದೆರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆ, ಕ್ರೀಡಾವೇದಿಕೆ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಲಿಕೆ ಎಂಬವುದು ಒಂದು ಉತ್ತಮ ಕಲೆ. ಆದಕಾರಣ, ವಿದ್ಯಾರ್ಥಿಗಳು ಕಲಿಕೆ ಸಂದರ್ಭದಲ್ಲಿ ಪುಸ್ತಕ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಓದುವ ಕ್ರಮ ಬೆಳೆಸಿಕೊಳ್ಳಬೇಕು.
 ಏಕಾಂತದಲ್ಲಿ ವಿದ್ಯಾಭ್ಯಾಸ ಮಾಡುವ  ವಿದ್ಯಾರ್ಥಿಗಳಲ್ಲಿ ಬುದ್ಧಿ ಶಕ್ತಿ, ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠೆ ಹೆಚ್ಚಿ, ಇವೆಲ್ಲವೂ ಓದಿಗೆ ಪೂರಕವಾಗುತ್ತವೆ ಎಂದು ತಿಳಿಸಿದರು. ಕಾಲೇಜು ಪ್ರಾಶುಂಪಾಲ ಪ್ರೊ.ಡಿ.ಎಸ್. ರಾಜು ಮಾತನಾಡಿ, ವೈಡಿಡಿ ಪ್ರಥಮ ದರ್ಜೆ  ಕಾಲೇಜು ಜಿಲ್ಲೆಯಲ್ಲಿ ಅತ್ಯತ್ತಮ ಕಾಲೇಜು ಎನಿಸಿಕೊಂಡು ಕೆಲಸ ಮಾಡುತ್ತಿದೆ, ಇಲ್ಲಿ  ವರ್ಷವಿಡೀ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಓದಿಗೆ ಪೂರಕವಾಗಿದೆ  ಎಂದರು. ಮುಂದಿನ ದಿನಗಳಲ್ಲಿ ವೈಡಿಡಿ ಪಿಜಿ ಶಿಕ್ಷಣ ಕಡೆ ಮುಖ ಮಾಡಿದ್ದು ಗ್ರಾಮೀಣ  ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ನಾನಾ ಗಣ್ಯರು ಇದ್ದರು.

--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement