ಬಾಬಾ ರಾಮ್ದೇವ್ ಪ್ರತಿಕೃತಿ ದಹನ
ಚನ್ನರಾಯಪಟ್ಟಣ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮಧುಚಂದ್ರ ನಡೆಸಲು ದಲಿತರ ಮನೆಗೆ ಭೇಟಿ ನೀಡುತ್ತಾರೆ ಎಂದು ಹೇಳಿರುವ ಯೋಗಗುರು ರಾಮದೇವ್ ವಿರುದ್ಧ ಪಟ್ಟಣದ ದಲಿತ ಜನಾಂಗದವರು ಗುರುವಾರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಕೆ.ಆರ್. ವೃತ್ತದಲ್ಲಿ ಬಾಬಾ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪ್ರಜಾ ವಿಮೋಚನಾ ಚಳುವಳಿಯ ಅಧ್ಯಕ್ಷ ಬಡಕನಹಳ್ಳಿ ಲಕ್ಷ್ಮಣ್ ಮಾತನಾಡಿ, ರಾಮ್ದೇವ್ ಬಾಬಾ ಇಂತಹ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಚುನಾವಣಾ ಆಯೋಗ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಬಾಬಾ ಬಿಜೆಪಿಯ ಏಜೆಂಟ್ನಂತೆ ವರ್ತಿಸುತ್ತಿದ್ದಾರೆ. ಸಮಾಜದಲ್ಲಿ ಆಶಾಂತಿಯನ್ನು ಸೃಷ್ಟಿಸಿರುವ ಈತನನ್ನು ಭಾರತದಿಂದ ಗಡೀಪಾರು ಮಾಡಬೇಕೆಂದರು. ಪ್ರತಿಭಟನೆಯಲ್ಲಿ ಐ.ಕೆ ಮಂಜುನಾಥ್, ದಂಡೋರ ಮಂಜುನಾಥ್, ಬದಿಕೆರೆ ಬಸವರಾಜು, ಜಂಬೂರು ಶಿವಣ್ಣ, ಮತಿಘಟ್ಟ ರಂಗಸ್ವಾಮಿ, ರಾಜೇಂದ್ರ ಬಾಬು ಇತರರು ಇದ್ದರು..