ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೀಳರಿಮೆ ಬಿಟ್ಟರೆ ಭವಿಷ್ಯ ಉಜ್ವಲ

Vishwanath S
Updated On : 4 May 2014, 1:18 am

ಹಾಸನ: ತನ್ನಲ್ಲಿರುವ ಕೀಳರಿಮೆಯನ್ನು ಬಿಟ್ಟು ಮಾಡುವ ಎಲ್ಲಾ ಕೆಲಸ ಕಾರ್ಯಗಳನ್ನು ನಿಷ್ಠೆ, ಆಸಕ್ತಿ, ಶ್ರದ್ಧೆ ಹಾಗೂ ಸಕಾರಾತ್ಮಕವಾಗಿ ಮಾಡಿದ್ದಲ್ಲಿ ಪ್ರತಿಯೊಬ್ಬರಿಗೂ ಉಜ್ವಲ ಭವಿಷ್ಯ ರೂಪಿಸಲು ಸಾಧ್ಯ ಎಂದು ಸಿ.ಎಂ.ಎಸ್.ಎಸ್.ಎಸ್ ಸಂಸ್ಥೆಯ ನಿರ್ದೇಶಕ ಫೆಲಿಕ್ ಥಾಮಸ್ ರುಜಾರಿಯೊ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಹಾಸನ ನಗರದ ಬಿ. ಕಾಟೀಹಳ್ಳಿಯಲ್ಲಿರುವ ಸೇವಾ ಸಂಸ್ಥೆಯ ಸಭಾಂಗಣದಲ್ಲಿ ಚಿಕ್ಕಮಗಳೂರು ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ (ಸಿ.ಎಂ.ಎಸ್.ಎಸ್.ಎಸ್) ಜೀವನಾಶ್ರಯ ಹಾಸನ ಹಾಗೂ ಭಾಂದವ್ಯ ನೆಟ್‌ವರ್ಕ್ ಆಶ್ರಯದಲ್ಲಿ ಎಚ್.ಐ.ವಿ. ಯಿಂದ ಜೀವಿಸುತ್ತಿರುವ ಮತ್ತು ಬಾಧಿತ ಮಕ್ಕಳಿಗೆ ಏರ್ಪಡಿಸಿದ 5 ದಿನದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಪಿ.ಎಲ್. ನಟರಾಜ್, ಎ.ಆರ್.ಟಿ. ಕೇಂದ್ರದ ವ್ಯೆದ್ಯಾಧಿಕಾರಿ ಡಾ. ನಿತಿನ್ ಮಾತನಾಡಿದರು. ಐದು ದಿನದ ಶಿಬಿರದಲ್ಲಿ ಹಲವು ಸಂಪನ್ಮೂಲ ವ್ಯಕ್ತಿ ಹಾಗೂ ಸಂತ ಜೋಸೆಫ್ ಶಾಲೆಯ ಪ್ರಾಧ್ಯಾಪಕ ಕ್ಸೇವಿಯರ್ ಕ್ರಿಸ್ಟೋಫರ್ ಮತ್ತು ಉಪನ್ಯಾಸಕ  ಮೋಹನ್, ಪ್ರಚೋದನಾ ಸಂಸ್ಥೆಯ ನಿರ್ದೇಶಕ ಶ್ರೀಯುತ ಪೌಲೋಸ್, ಮಕ್ಕಳ ರಕ್ಷಣಾಧಿಕಾರಿ ತ ಕಾಂತರಾಜ್, ಪ್ರಾಣಾಯಾಮ ಮತ್ತು ಯೋಗ ಕೇಂದ್ರದ ಸಂತೋಷ್ ಗುರೂಜಿ  ಸ್ವಯಂ ಪ್ರೇರಣೆಯಿಂದ ಭಾಗವಹಿಸಿದರು.
ವ್ಯೆದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕ ಡಾ. ಸಿದ್ದರಾಮ್ಮೇಟ್ರಿ ಹಾಗೂ ಆಪ್ತಸಮಾಲೋಚಕಿ ನಿಚಿತಾ ಅವರ ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮಕ್ಕಳ ಅರೋಗ್ಯ ತಪಾಸಣೆ ಹಾಗೂ ಆಪ್ತ ಸಮಾಲೋಚನೆ ಮಾಡಿದರು.
ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊಫೆಸರ್ ಸುಬ್ರಮಣ್ಯ, ವಕೀಲ  ನಾರ್ಯಣ, ಜಿಲ್ಲಾ ಕೈಗಾರಿಕಾ ಕೇಂದ್ರದ ತರಬೇತಿದಾರ ಮಂಜುನಾಥ್ ಯೋಗಾಭ್ಯಾಸದ ಅನುಕೂಲಗಳನ್ನು ತೋರಿಸಿಕೊಟ್ಟರು.
ಹಾಸನದ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣೇಗೌಡ,  ಎಆರ್‌ಟಿ ಕೇಂದ್ರದ ಆಪ್ತಸಮಾಲೋಚಕ  ಶಿವಶಂಕರ್, ಜಾನಪದ ಕಲಾತಂಡದ ದಿಲೀಪ್ ಹಾಗೂ ಸಂಗಡಿಗರು ಹಾಗೂ  ಹಾಸನಾಂಬ ವ್ಯೆದ್ಯಕೀಯ ಕಾಲೇಜಿನ ಅರ್ಯ ವೈದ್ಯಕೀಯ ವಿದ್ಯಾರ್ಥಿಗಳು ಆಗಮಿಸಿ ಮಕ್ಕಳೊಂದಿಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ರಂಜಿಸಿದರು.
ಶಿಬಿರದಲ್ಲಿ ನಾನಾ ಮನೋರಂಜನಾ ಸ್ಪರ್ಧೆಗಳು, ನ್ಯತ್ಯಗೀತೆಗಳು, ಡ್ರಾಯಿಂಗ್, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬಾಲಸುಂದರ್, ಶನಂತಾಚಾರಿ, ಜಾನಕಿ, ರತ್ನ, ಸುಕಣ್ಯ, ಪ್ರಮೀಳಾ, ಮಮತಾ ಇದ್ದರು. 38 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರದಲ್ಲಿ ಐದು ದಿನ ಏರ್ಪಡಿಸಿದ್ದ ನಾನಾ ಸೃಜನಾತ್ಮಕ ಚಟುವಟಿಕೆ ಮತ್ತು ಶಿಸ್ತಿನ ಮೌಲ್ಯಮಾಪನದಲ್ಲಿ ಪಡೆದ ಅಂಕಗಳಿಗೆ ಅನುಸಾರ ಎಲ್ಲರಿಗೂ ಪ್ರೋತ್ಸಾಹಕರ ಬಹುಮಾನ ವಿತರಿಸಲಾಯಿತು.
ಸಿ.ಎಂ.ಎಸ್.ಎಸ್.ಎಸ್.ಸಂಸ್ಥೆಯ ಸಂಯೋಜಕ ವಿನ್ಸೆಂಟ್ ಸಿಕ್ವೇರಾ ನಿರೂಪಿಸಿದರು.  ರಕ್ಷಿತ್ ಸ್ವಾಗತಿಸಿದರು. ಸುಕನ್ಯಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement