ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯಗಚಿ ಏತನೀರಾವರಿ ಪ್ರಾಯೋಗಿಕ ನೀರು ಬಿಡುಗಡೆ

Vishwanath S
Updated On : 4 May 2014, 1:19 am

ಹಾಸನ: ಬೇಲೂರು ತಾಲ್ಲೂಕಿನ ಯಗಚಿ ಏತ ನೀರಾವರಿಯಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದೆ ಎಂದು ಯಗಚಿ ಯೋಜನಾ ವಿಭಾಗದ ಕಾರ್ಯಪಾಲಕ ಅಭಿಯಂತರ ಎಚ್.ವಿ. ರಾಜಶೇಖರ್ ಅವರು ತಿಳಿಸಿದ್ದಾರೆ.
ಯಗಚಿ ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಎಲೆಕ್ಟ್ರೋ ಮೆಕ್ಯಾನಿಕಲ್ ಕಾಮಗಾರಿಗಳು ಮುಗಿದಿದ್ದು, ಸಿವಿಲ್ ಕಾಮಗಾರಿಗಳು ನಾನಾ ಹಂತದಲ್ಲಿ ಪ್ರಗತಿಯಲ್ಲಿವೆ. 340 ಎಚ್‌ಪಿ ಸಾಮರ್ಥ್ಯದ ಮೂರು ಮೋಟರ್ ಅಳವಡಿಸಲಾಗಿದ್ದು, ಪ್ರತಿ ಮೋಟರ್ 18.33 ಕ್ಯೂಸೆಕ್ಸ್ ನೀರನ್ನು ಮೇಲೆತ್ತುವ ಸಾಮರ್ಥ್ಯ ಹೊಂದಿದ್ದು ಪ್ರತಿ ಪಂಪು ಮೋಟರನ್ನು ಪ್ರಾಯೋಗಿಕವಾಗಿ ಸತತವಾಗಿ 72 ಗಂಟೆಗಳ ಕಾಲ ಚಾಲನೆ ಮಾಡಲಾಗುವುದು.
ಪ್ರಾಯೋಗಿಕವಾಗಿ ನೀರು ಹರಿಸಿ ಎಡದಂಡೆ ನಾಲೆಯ 4 ಕಿಮೀವರೆಗಿನ ಹುಲ್ಲಗುಂಡಿ ಊರುಮುಂದಿನ ಕೆರೆ, ಹುಲ್ಲಗುಂಡಿ ಚಿಕ್ಕಕಟ್ಟೆ, ಹುಲ್ಲಗುಂಡಿ ಗೋಕಟ್ಟೆ,ಹಂದ್ರಾಳು ದೊಡ್ಡಕೆರೆ, ಹಂದ್ರಾಳು ಚಿಕ್ಕಯ್ಯನ ಕೆರೆ, ಹಂದ್ರಾಳು ಗೋ ಕಟ್ಟೆ, ಹಂದ್ರಾಳು ಕಟ್ಟೆ, ಶಿವಯೋಗಿಪುರದ ಊರಮುಂದಿನಕೆರೆ, ಶಿವಯೋಗಿಪುರದ ಸಣ್ಣಪ್ಪನ ಕಟ್ಟೆ ಹಾಗೂ ಬಲದಂಡೆ ನಾಲೆಯ 5.25 ಕಿಮೀ ವರೆಗಿನ ಮಾದಿಹಳ್ಳಿ ದೊಡ್ಡಕೆರೆ, ಮಾದಿಹಳ್ಳಿ ಕೊಪ್ಪಲು ಕಟ್ಟೆ, ಮಾದಿಹಳ್ಳಿ ಚಿಕ್ಕ ಕಟ್ಟೆ, ಮಾದಿಹಳ್ಳಿ ಗೋ ಕಟ್ಟೆ ತುಂಬಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement