ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚರಿತ್ರೆಯಲ್ಲಿ ಬಸವಣ್ಣಗೆ ಶಾಶ್ವತ ಸ್ಥಾನ

Vishwanath S
Updated On : 5 May 2014, 12:42 pm

ಅರಸೀಕೆರೆ: 12ನೇ ಶತಮಾನದ ಶರಣರು ಸಮಾಜದಲ್ಲಿದ್ದ ವರ್ಣಭೇಧ, ಜಾತಿಭೇಧಗಳನ್ನು ಹೋಗಲಾಡಿಸಲು ಮಹಾಕ್ರಾಂತಿಯನ್ನೇ ನಡೆಸಿ ಇತಿಹಾಸದ ಪುಟದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರೆ. ಇಂದಿನ ರಾಜಕಾರಣಿಗಳು ಇದನ್ನು ಅನುಸರಿಸಲಿ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ತಾಲ್ಲೂಕಿನ ಜಾವಗಲ್ ಹೋಬಳಿಯ ನಾಗೇನಹಳ್ಳಿ ಗ್ರಾಮದಲ್ಲಿ ಮಹದೇಶ್ವರ  ಸ್ವಾಮಿಯವರ ನೂತನ ದೇವಾಲಯ ಜೀರ್ಣೋದ್ಧಾರ  ಹಾಗೂ ನೂತನ ಗೋಪುರ ಕಳಸ ಸ್ಥಾಪನೆ ಮತ್ತು ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶಿವಶರಣರು ಸಮಾಜದಲ್ಲಿ ಮನೆ ಮಾಡಿದ್ದ ಮೌಢ್ಯತೆಯನ್ನು ದೂರಮಾಡಲು ಕ್ರಾಂತ್ರಿಯನ್ನೇ ನಡೆಸಿದ್ದಾರೆ. ಇದು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು. ಆಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದರು.
ಪ್ರಶಂಸೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ರೈತರ ಬಗ್ಗೆ ಕಾಳಜಿ ಇದ್ದು ಅವರು ಈಗ ಅಧಿಕಾರದಲ್ಲಿದ್ದರೆ ಇಂದಿನ ಸಂಕಷ್ಟದ ಪರಿಸ್ಥಿತಿಯ ನೆರವಿಗೆ ಧಾವಿಸುತ್ತಿದ್ದರು.
ಅವರು ಅಧಿಕಾರದಲ್ಲಿರಲಿ, ಬಿಡಲಿ, ಈ ಬಾರಿ ಸಂಸದರಾದ ನಂತರ ಅರಸೀಕೆರೆ ತಾಲ್ಲೂಕಿನ ಬಗ್ಗೆ ಕಾಳಜಿ ವಹಿಸಲಿದ್ದಾರೆ. ಅವರಲ್ಲಿ ಧಾರ್ಮಿಕ ಭಾವನೆ ಹೆಚ್ಚಾಗಿರುವುದರಿಂದಲೇ ಎಂತಹ ಪರಿಸಿತಿಯಲ್ಲೂ ಎದೆಗುಂದದೆ ಮುನ್ನಡೆಯುತ್ತಿದ್ದಾರೆ ಎಂದರು.
ಶಾಸಕ ಕೆ.ಎಂ. ಶಿವಲಿಂಗೇಗೌಡ ಯಗಚಿ ನೀರನ್ನು ತಾಲೂಕಿಗೆ ತರುವತ್ತ ತಮ್ಮ ಚಿತ್ತ ಹರಿಸಲಿ ರೈತಪರ ನಿಲುವು ಪ್ರದರ್ಶಿಸಲಿ ಎಂದು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement