ತೆಂಗು ಬೆಳೆಗಾರರಿಗೆ ಆತ್ಮಸ್ಥೈರ್ಯ ತುಂಬಿ: ಮಾಜಿ ಸಿಎಂ ಬಿಎಸ್ವೈ
ಜಾವಗಲ್: ಜಾವಗಲ್ ಹೋಬಳಿಯಲ್ಲಿ ಮಳೆಯ ಅಭಾವದಿಂದ ಸಾವಿರಾರು ತೆಂಗಿನ ಮರಗಳು ನಾಶವಾಗಿದ್ದು, ಸಂಕಷ್ಟದಲ್ಲಿರುವ ತೆಂಗು ಬೆಳೆಗಾಗರರಿಗೆ ಸರ್ಕಾರ ಸ್ಪಂದಿಸಿ ಆತನಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ಜಾವಗಲ್ ಹೋಬಳಿಯ ನಾಗೇನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮಹದೇಶ್ವರ ಸ್ವಾಮಿಯ ನೂತನ ದೇವಾಲಯ ಜೀರ್ಣೋದ್ಧಾರ ಹಾಗೂ ನೂತನ ಕಳಸ ಸ್ಥಾಪನೆ ಮತ್ತು ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಭಾಗದ ಚುನಾಯಿತ ಜನ ಪ್ರತಿನಿಧಿಗಳು ಕೆರೆ ಕಟ್ಟೆಗಳಿಗೆ ನೀರು ಹರಿಸುವ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಸಲಹೆ ನೀಡಿದರು.
ಗೌರವ ಸೂಚಿಸುವುದು ಕರ್ತವ್ಯ: ಬಸವಣ್ಣನವರ ತತ್ವಾದರ್ಶ ಚಿಂತನೆ ಇಂದಿನ ಜನಾಂಗಕ್ಕೆ ಅತ್ಯಗತ್ಯ. ಅವರ ಅಂದಿನ ಅನುಭವ ಮಂಟಪದ ಚಿಂತನೆಗಳು ಇಂದಿನ ಸಂಸತ್ತಿಗೆ ಮಾರ್ಗದರ್ಶನ. ಇಂತಹ ಮಹಾ ಪುರುಷರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಶ್ರೇಷ್ಠ ಮಹಾ ಪುರುಷರಿಗೆ ಗೌರವ ಸೂಚಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರದ್ಧಾ ಭಕ್ತಿ ದೈವ ಸಾಕ್ಷಾತ್ಕಾರಕ್ಕೆ ಏಕ ದೇವತಾ ನಿಷ್ಠೆ ಇರಬೇಕು ಮನುಷ್ಯನ ಉತ್ತಮ ಜೀವನಕ್ಕೆ ಸಾಮಾಜಿಕ ಕಾನೂನು ಮತ್ತು ಸಾಕ್ಷಿಯ ಪ್ರಜ್ಞರ ಭಯವಿರ ಬೇಕು ಧರ್ಮ- ಅಧರ್ಮಗಳ ವಿವೇಚನೆ ಇದ್ದರೂ ಹೃದಯ ಸಂಸ್ಕಾರದ ಕೊರತೆಯಿಂದ ಕೆಟ್ಟ ಕೆಲಸಗಳನ್ನು ಮಾಡುತ್ತೇವೆ ಅದರ ಬದಲಿಗೆ ಮಾನವೀಯ ಮೌಲ್ಯಗಳಿಗೆ ಒತ್ತುಕೊಟ್ಟು ನಡೆಯಬೇಕೆಂದರು. ಶಾಸಕ ಶಿವಲಿಂಗೇಗೌಡ ಮಾತನಾಡಿ, 12 ನೇ ಶತಮಾನದ ಶವ ಶರಣರು ಹಾಕಿ ಕೊಟ್ಟ ಹಾದಿಯಲ್ಲಿ ತಾವು ನಡೆದು ಶಾಸಕರಾದ ಕ್ಷಣದಿಂದಲೂ ಎಲ್ಲಾ ಧರ್ಮದವರನ್ನು ಸಮಾನವಾಗಿ ಕೊಂಡೊಯ್ದ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಕೆಲಸ ನಿರ್ವಹಿಸುತ್ತಿದ್ದೇನೆ ಎಂದರು. ಸಮಾರಂಭದಲ್ಲಿ ನಿರಂಜನ ಪೀಠ ಮಾಡಾಳಿನ ರುದ್ರಮುನಿ ಸ್ವಾಮೀಜಿ, ಚಿಕ್ಕಮಗಳೂರು ಬಸವ ಮಮದಿರದ ಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು ವೇದಿಕೆಯಲ್ಲಿ ಎಂಸಿಎ ಮರಿಸ್ವಾಮಿ, ಸಾಹಿತಿ ಚಟ್ಟನಹಳ್ಳಿಮಹೇಶ್, ದಿಬ್ಬದ ಹಳ್ಳಿ ಶ್ಯಾಮ ಸುಂದರ್, ಉಪನ್ಯಾಸಕ ಈಶ್ವರಪ್ಪ, ನಾಗೇನಹಳ್ಳಿ ಮಹದೇವಪ್ಪ, ವಿರೂಪಾಕ್ಷಯ್ಯ ಮಾತನಾಡಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಲಕ್ಷ್ಮಣ್ ಹುಚ್ಚೇಗೌಡ, ತಾಲೂಕು ಸಾಧು ವೀರಶೈವ ಸಂಘದ ಅಧ್ಯಕ್ಷ ಹಿರಿಯೂರು ರೇವಣ್ಣ, ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವಾಲಯದ ಅಧ್ಯಕ್ಷ ಜಿ.ವಿ ಬಸವರಾಜು, ಕೊರಟಗೆರೆ ಪ್ರಕಾಶ್, ಹಾರನಹಳ್ಳಿ ಸಿದ್ದಪ್ಪ ಇದ್ದರು.