ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

6 ತಿಂಗಳೊಳಗೆ ರಸ್ತೆ ಅಭಿವೃದ್ಧಿ: ಶಾಸಕ

Vishwanath S
Updated On : 7 May 2014, 12:06 pm

ಸಕಲೇಶಪುರ: ಮುಂದಿನ ಆರು ತಿಂಗಳ ಅವಧಿಯಲ್ಲಿ ತಾಲೂಕಿನ ಬಹುತೇಕ ಪ್ರಮುಖ ರಸ್ತೆಗಳು ಅಭಿವೃದ್ಧಿಗೊಳ್ಳಲಿವೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.
ತಾಲೂಕಿನ ಬಂದಿಹಳ್ಳಿ ಪರಿಶಿಷ್ಟ ಕಾಲೋನಿಯಲ್ಲಿ 10 ಲಕ್ಷ  ರು. ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ದುಸ್ಥಿತಿಗೆ ಈಡಾಗಿದ್ದ ಕೂಡಗು ಹಾಗೂ ಹಾಸನ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದ ಬಾಳ್ಳುಪೇಟೆ- ಕೆರೂಡಿ ರಸ್ತೆ ಈಗಾಗಲೇ ಅಭಿವೃದ್ಧಿ ಕಾಮಗಾರಿ ಮುಕ್ತಾಯಗೊಂಡಿದ್ದರೆ, ವಣಗೂರು- ಚಂಗಡಿಹಳ್ಳಿ ಮಾರ್ಗದ 20 ಕಿ.ಮೀ. ಸಂಪರ್ಕ ರಸ್ತೆ ಕಾಮಗಾರಿ ಶೇ 98ರಷ್ಟು ಮುಗಿದಿದೆ. ಬಿರಡಹಳ್ಳಿ- ಚಗಂಡಿಹಳ್ಳಿ ನಡುವಿನ 58 ಕಿ.ಮೀ. ದೂರದ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ರು. 22 ಕೋಟಿ ವೆಚ್ಚದಲ್ಲಿ ಆರಂಭವಾಗಿದೆ ಎಂದರು.
ಇನ್ನೊಂದು ವಾರದಲ್ಲಿ ಕಾಮಗಾರಿ: ಕಳಸ- ವಿರಾಜಪೇಟೆ ರಾಜ್ಯ ಹೆದಾರಿ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಇದಲ್ಲದೇ, ಹೆಚ್ಚು ಮಳೆ ಬೀಳುವ ಬಿಸ್ಲೆ ಮಾರ್ಗದಲ್ಲಿರುವ ವಣಗೂರು-ಸುಬ್ರಮಣ್ಯ ಸಂಪರ್ಕಿಸುವ ರಸ್ತೆಯನ್ನು ರು. 28 ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣ ಮಾಡುವ ಉದ್ದೇಶವಿರುವುದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು ಇನ್ನೊಂದು ವಾರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement