ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೀರಿನ ಸಮಸ್ಯೆ ನೀಗಿಸಲು ಒಂದು ಕೋಟಿ ಕೊಡಿ

Vishwanath S
Updated On : 7 May 2014, 12:05 pm

ಕ.ಪ್ರ.ವಾರ್ತೆ, ಸಕಲೇಶಪುರ, ಮೇ 6
ಕ್ಷೇತ್ರದಲ್ಲಿ ಕುಡಿಯುವ ನೀರು ಸಮಸ್ಯೆ  ಬಗೆಹರಿಸಲು ಸರ್ಕಾರ ಒಂದು ಕೋಟಿ  ರು. ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸೋಮವಾರ ಪಟ್ಟಣದ ತಾಲೂಕು ಪಂಚಾಯ್ತಿ  ಸಭಾಂಗದಲ್ಲಿ ನಡೆದ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕಾಗಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಹೆಚ್ಚು ಮಳೆಬೀಳುವ ಮಲೆನಾಡು ಪ್ರದೇಶವಾದ ಸಕಲೇಶಪುರ- ಆಲೂರು ತಾಲೂಕಿನಲ್ಲಿ ಭರದ ಛಾಯೆ ಅವರಿಸಿದೆ ಎಂದು ಹೇಳಿದರು.
ಅನುದಾನ ಬೇಕು: ಮುಂಗಾರು ವಿಳಂಬವಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಉಲ್ಬಣವಾಗುವ ಸೂಚನೆ ಇರುವುದರಿಂದ ಕುಡಿಯುವ ನೀರು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗ್ರಾ.ಪಂಗಳ ವ್ಯಾಪ್ತಿಯ ಗ್ರಾಮಗಳನ್ನು ಪಟ್ಟಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ಎರಡು ತಿಂಗಳಿಗೆ ಯಾವುದೇ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕೊಳವೆ ಬಾವಿ ದುರಸ್ತಿ, ಕಡಿಮೆ ನೀರು ಇರುವ ತೆರೆದ ಬಾವಿ ಆಳ ಮಾಡುವುದು ಹಾಗೂ ಅಗತ್ಯ ಇರುವೆಡೆ ಕೊಳವೆ ಬಾವಿ ಕೊರೆಸಲುಙ ಹೆಚ್ಚು ಒತ್ತು ನೀಡಲು ಯೋಜನೆ ರೂಪಿಸಲಾಗಿದೆ. ಈ ಸಮಸ್ಯೆ ಬಗೆಹರಿಸಲು ತುರ್ತಾಗಿ ನೂರು ಕೊಳವೆ ಬಾವಿ ಹಾಗೂ 70 ತೆರೆದ ಬಾವಿ ನಿರ್ಮಿಸಬೇಕಾಗಿದೆ. ಇದಕ್ಕೆ ಹೆಚ್ಚಿನ ಅನುದಾನ ಬೇಕಿದೆ ಎಂದರು.
ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ: ಕುಡಿಯುವ ನೀರು ಒದಗಿಸಲು ಎದುರಾಗುವ ಕಾನೂನನ್ನು ಬದಿಗೆ ಸೇರಿಸುವ ಮೂಲಕ ಪ್ರವಾಹೋಪಾದಿಯಲ್ಲಿ ಗ್ರಾ.ಪಂ ಅಧಿಕಾರಿಗಳು ಕೆಲಸ ಮಾಡಬೇಕಿದೆ. ಈ ಅಧಿಕಾರಿಗಳಿಗೆ ವಿದ್ಯುತ್ ಹಾಗೂ ಜಿಪಂ ಉಪವಿಭಾಗದ ಅಧಿಕಾರಿಗಳು ಸಹಕರಿಸುವಂತೆ ಸೂಚನೆ ನೀಡಲಾಗಿದ್ದು ಸಮಸ್ಯೆ ಎದುರಿಸಲು ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು. ಇನ್ನೊಂದು ವಾರದಲ್ಲಿ ತಾಲೂಕಿನಲ್ಲಿ ಕುಡಿಯುವ ನೀರು ಸಮಸ್ಯೆ ಎದುರಿಸುತ್ತಿರು ಎಲ್ಲಾ ಗ್ರಾಮಗಳಿಗೂ ಬೇಟಿ ನೀಡಿ ಕಾಮಗಾರಿ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ಮಂಜುಳಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಭಜಂತ್ರಿ, ಜಿಪಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್ ನಾಯಕ್, ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ತುಳಸಿಪ್ರಸಾದ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement