ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಂಕರ ಭಗವತ್ಪಾದರ ಜಯಂತಿ ಆಚರಣೆ

Vishwanath S
Updated On : 7 May 2014, 12:06 pm

ಅರಸೀಕೆರೆ: ಸನಾತನ ಧರ್ಮದ ಪುನರುಜ್ಜೀವನಕ್ಕಾಗಿ ಶಂಕರಾಚಾರ್ಯರು ತಮ್ಮ 32 ವರ್ಷಗಳ ಜೀನಿತ ಅವಧಿಯಲ್ಲಿ 4 ಬಾರಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಚರಿಸಿ ದೇಶದ ನಾಲ್ಕೂ ದಿಕ್ಕುಗಳಲ್ಲಿ 4 ಶಂಕರ ಪೀಠಗಳನ್ನು ಸ್ಥಾಪಿಸಿ, ಶ್ರೇಷ್ಠ ಕವಿಗಳಾಗಿ, ಶ್ರೇಷ್ಠ ಸಂತರಾಗಿ, ದಾರ್ಶನಿಕರಾಗಿ ಮನುಕುಲ ಉದ್ಧಾರ ಮಾಡಿದ ದೈವಾಂಶ ಸಂಭೂತರು ಎಂದು ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ. ರಮೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಭವಾನಿ ಶಂಕರ ದೇವಾಲಯದಲ್ಲಿ ತಾಲೂಕು ಬ್ರಾಹ್ಮಣ ಸಂಘ, ಬ್ರಾಹ್ಮಣ ಯುವಕ ಸಂಘ, ಸೀತಾ ಮಹಿಳಾ ಸಂಘದ ಸಹಯೋಗದೊಂದಿಗೆ ಅಧ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀಶಂಕರ ಭಗವತ್ಪಾದರ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಶ್ರೀ ಶಂಕರರ ಅಧ್ವೈತ ತತ್ವ ಸಿದ್ಧಾಂತಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಎಚ್.ಎಂ.ರಾಮಚಂದ್ರರಾವ್, ರಾಮಪ್ರಸನ್ನಕುಮಾರ್, ಟಿ.ಆರ್.ನಾಗರಾಜ್, ಅನಂತಪದ್ಮನಾಭ್, ಮುರುಳಿ, ಮಂಜುನಾಥ್, ಕೆ.ಆರ್.ಸುರೇಶ್, ಬಿ.ಪಿ. ಸಾಂಗ್ಲಿ, ಜೆ.ಜಿ. ಗೋಪಾಲ್, ಸೀತಾ ಮಹಿಳಾ ಸಂಘದ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.
ಶಂಕರಾಚಾರ್ಯರ ಜಯಂತಿಯ ಅಂಗವಾಗಿ ವೇದ ಬ್ರಹ್ಮ ತಳಲೂರು ಚಂದ್ರಶೇಖರ್ ಅವರ ನೇತೃತ್ವದಲ್ಲಿ ಭವಾನಿ ಶಂಕರರಿಗೆ ರುದ್ರಾಭಿಷೇಕ ವಿಶೇಷ ಪೂಜಾದಿಗಳು ಜರುಗಿದವು. ಇದೇ ವೇಳೆ ಶಂಕರ ಸ್ತೋತ್ರ, ಶಿವಾನಂದ ಲಹರಿ, ಸೌಂದರ್ಯ ಲಹರಿ ಪಠಣ ಮಾಡಿ ಆದಿ ಶಂಕರಾಚಾರ್ಯರ ಉತ್ಸವವನ್ನು ನಡೆಸಿ ವಸಂತ ಸೇವೆ ಕೈಗೊಳ್ಳಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement