ಹೋಬಳಿವಾರು ಬೆಳೆಗೆ ವಿಮಾ ಯೋಜನೆ
ಕನ್ನಡಪ್ರಭ ವಾರ್ತೆ ಟಿ ಹಾಸನ ಟಿ ಮೇ 6
ಜಿಲ್ಲೆಯಲ್ಲಿ 2014ರ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಐಈಐಈಐ ಔ್ಟಟಛ್ಟ್ಠಿಜ ಎಐಈ ಔಡಿಜರವರ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಯು ನಿಗದಿತ ಬೆಳೆಗಳಿಗೆ ನಿಗದಿತ ಹೋಬಳಿಗಳಿಗೆ ಅನ್ವಯಿಸುತ್ತದೆ. ವಿವಿಧ ಬೆಳೆಗಳ ಜೊತೆಗೆ ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ (ನೀರಾವರಿ) ಮತ್ತು ಆಲೂಗಡ್ಡೆ (ಮಳೆಯಾಶ್ರಿತ) ಹಾಗೂ ಬಾಳೆ ಬೆಳೆಗಳಿಗೆ ನಿಗದಿತ ಹೋಬಳಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಶಕೀಲ್ ಅಹಮದ್ ತಿಳಿಸಿದ್ದಾರೆ.
ಆಲೂರು ತಾಲೂಕಿನ ಆಲೂರು, ಕುಂದೂರು, ಪಾಳ್ಯ, ಕೆ. ಹೊಸಕೋಟೆ ಹೋಬಳಿಗಳಲ್ಲಿ ಆಲೂಗಡ್ಡೆ (ಮಳೆಯಾಶ್ರಿತ) ಬೆಳೆಯನ್ನು ವಿಮೆಗೆ ಪರಿಗಣಿಸಲಾಗಿದೆ.
ಅರಕಲಗೂಡು ತಾಲೂಕಿನ ಅರಕಲಗೂಡು, ದೊಡ್ಡಮಗ್ಗೆ, ಕೊಣನೂರು, ಮಲ್ಲಿಪಟ್ಟಣ, ರಾಮನಾಥಪುರ ಹೋಬಳಿಗಳಲ್ಲಿ ಆಲೂಗಡ್ಡೆ (ಮಳೆಯಾಶ್ರಿತ) ಬೆಳೆಯನ್ನು ವಿಮೆಗೆ ಪರಿಗಣಿಸಲಾಗಿದೆ.
ಬೇಲೂರು ತಾಲೂಕಿನ ಅರೆಹಳ್ಳಿ, ಬಿಕ್ಕೋಡು ಹೋಬಳಿಗಳಲ್ಲಿ ಆಲೂಗೆಡ್‌ಡೆ (ಮಳೆಯಾಶ್ರಿತ) ಬೆಳೆ ಹಾಗೂ ಬೇಲೂರು, ಹಳೇಬೀಡು,ಹೋಬಳಿಗಳಲ್ಲಿ ಆಲೂಗಡ್ಡೆ (ನೀರಾವರಿ), ಹಾಗೂ ಮಾದಿಹಳ್ಳಿ ಹೋಬಳಿಯಲ್ಲಿ ಆಲೂಗಡ್ಡೆ (ಮಳೆಯಾಶ್ರಿತ) ಬೆಳೆಯನ್ನು ವಿಮೆಗೆ ಪರಿಗಣಿಸಲಾಗಿದೆ.
ಅರಸೀಕೆರೆ ತಾಲೂಕಿನ ಗಂಡಸಿ, ಅರಸೀಕೆರೆ, ಜಾವಗಲ್ ಮತ್ತು ಕಣಕಟ್ಟೆ ಹೋಬಳಿಗಳಲ್ಲಿ ಆಲೂಗಡ್ಡೆ (ನೀರಾವರಿ) ಮತ್ತು ಆಲೂಗಡ್ಡೆ (ಮಳೆಯಾಶ್ರಿತ) ಹಾಗೂ ಬಾಳೆ ಬೆಳೆಯನ್ನು ವಿಮೆಗೆ ಪರಿಗಣಿಸಲಾಗಿದೆ.
ಚನ್ನರಾಯಪಟ್ಟಣ ತಾಲೂಕಿನ ಬಾಗೂರು, ದಂಡಿಗನಹಳ್ಳಿ ಹೋಬಳಿಗಳಲ್ಲಿ ಆಲೂಗಡ್ಡೆ (ಮಳೆಯಾಶ್ರಿತ) ಮತ್ತು ಆಲೂಗಡ್ಡೆ (ನೀರಾವರಿ) ಬೆಳೆಯನ್ನು ವಿಮೆಗೆ ಪರಿಗಣಿಸಲಾಗಿದೆ.
ಹಾಸನ ತಾಲ್ಲೂಕಿನ ದುದ್ದ, ಕಟ್ಟಾಯ, ಸಾಲಗಾಮೆ ಹೋಬಳಿಗಳಲ್ಲಿ ಆಲೂಗಡ್ಡೆ (ನೀರಾವರಿ) ಮತ್ತು ಶಾಂತಿಗ್ರಾಮ ಹೋಬಳಿಯಲ್ಲಿ ಆಲೂಗಡ್ಡೆ (ಮಳೆಯಾಶ್ರಿತ) ಬೆಳೆಯನ್ನು ವಿಮೆಗೆ ಪರಿಗಣಿಸಲಾಗಿದೆ.
ಅದರಂತೆ ಹೊಳೆನರಸೀಪುರ ತಾಲೂಕಿನ ಹೊಳೆನರಸೀಪುರ, ಹಳೇಕೋಟೆ ಮತ್ತು ಹಳ್ಳಿಮೈಸೂರು ಹೋಬಳಿಗಳಲ್ಲಿ ಆಲೂಗಡ್ಡೆ (ಮಳೆಯಾಶ್ರಿತ) ಬೆಳೆಯನ್ನು ವಿಮೆಗೆ ಪರಿಗಣಿಸಲಾಗಿದೆ.
ಪ್ರತಿ ಹೆಕ್ಟೇರ್‌ಗೆ ರೈತರು ಪಾವತಿಸಬೇಕಾಗಿರುವ ವಿಮಾ ಕಂತು ಆಲೂಗಡ್ಡೆ (ನೀರಾವರಿ)ಗೆ ರು. 6000-, ಆಲೂಗಡ್ಡೆ (ಮಳೆಯಾಶ್ರಿತ)ಗೆ ರು. 4440 ಹಾಗೂ ಬಾಳೆ ಬೆಳೆಗೆ ರು. 6000 ನಿಗದಿಪಡಿಸಲಾಗಿದೆ.
2014ರ ಮುಂಗಾರು ಹಂಗಾಮಿಗೆ ಬೆಳೆ ಸಾಲ ಪಡೆದ ರೈತರಿಗೆ ಜೂನ್ 30 ರೊಳಗೆ ಬೆಳೆ ಸಾಲ ಮಂಜೂರಾಗಿದ್ದರೆ ಅಂತಹ ರೈತರನ್ನು ಕಡ್ಡಾಯವಾಗಿ ಯೋಜನೆಯಡಿಯಲ್ಲಿ ಒಳಪಡಿಸತಕ್ಕದ್ದು. ಬೆಳೆ ಸಾಲ ಪಡೆಯದ ಆಲೂಗಡ್ಡೆ ಬೆಳೆಗಾರರು ನಿಗದಿತ ವಿಮಾ ಕಂತನ್ನು ತಾವು ಬ್ಯಾಂಕ್ ಖಾತೆ ಹೊಂದಿರುವ ಶಾಖೆಯಲ್ಲಿ ಪಾವತಿಸಬಹುದಾಗಿರುತ್ತದೆ. ಈ ಯೋಜನೆಯಡಿ ಪಾಲ್ಗೊಳ್ಳಲು ಕೊನೆಯ ದಿನಾಂಕವನ್ನು ಬೆಳೆಸಾಲ ಪಡೆಯದ ರೈತರಿಗೆ ಜೂ. 30 ಎಂದು ನಿಗದಿಪಡಿಸಲಾಗಿದೆ.
ಈ ಯೋಜನೆಯಡಿ ಪಾಲ್ಗೊಳ್ಳಲು ರೈತರು ತಮ್ಮ ಜಮೀನಿನ ಪಹಣಿ, ಖಾತಾ ಅಥವಾ ಜಮೀನಿನ ಪಟ್ಟಾ ಪುಸ್ತಕದ ಪ್ರತಿ ಸಲ್ಲಿಸುವುದು. ಆಲೂಗಡ್ಡೆ ಬೆಳೆಗಾರರು ನಿಗದಿತ ದಿನಾಂಕದೊಳಗೆ ವಿಮಾ ಕಂತನ್ನು ಪಾವತಿಸಿ ತಮ್ಮ ಬೆಳೆಯನ್ನು ಈ ವಿಮಾ ಯೋಜನೆಯಡಿ ಒಳಪಡಿಸಿಕೊಳ್ಳಬೇಕೆಂದು ತೋಟಗಾರಿಗೆ ಉಪನಿರ್ದೇಶಕರು ಕೋರಿದ್ದಾರೆ.