ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಡಳಿತ ಕುಸಿತ: ಎಸಿ ಕಚೇರಿಗೆ ಮುತ್ತಿಗೆ

Rashmi Kasaragodu
Updated On : 8 May 2014, 1:13 am

ಸಕಲೇಶಪುರ: ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಕಲೇಶಪುರ ತಾಲೂಕು ಮಾಫಿಯಗಳ ತವರಾಗಿದೆ ಎಂದು ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಆರೋಪಿಸಿದ್ದಾರೆ.
ಬುದವಾರ ಕಾಂಗ್ರೆಸ್ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಉಪವಿಭಾಗಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದ ನಂತರ ಮಾತನಾಡಿ, ಬಳ್ಳಾರಿಯಲ್ಲಿ ಜನಪ್ರತಿನಿಧಿಗಳು ಅದಿರು ಮಾಫಿಯ ಸೃಷ್ಟಿಸಿದರೆ, ತಾಲೂಕಿನಲ್ಲಿ ಸರ್ಕಾರಿ ಅಧಿಕಾರಿಗಳು ಮರಳು ಹಾಗೂ ಮರದ ಮಾಫಿಯಸೃಷ್ಟಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನ ಎಲ್ಲೆಡೆ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಬಹುತೇಕ ಎಲ್ಲಾ ಇಲಾಖೆ ಅಧಿಕಾರಿಗಳಿಗೂ ಇದರ ಲಾಭ ದೂರಕುತ್ತಿದೆ. 10 ಟನ್ ಸಾಗಿಸುವ ಲಾರಿಗಳು 30 ಟನ್ ಭಾರ ಹೊತ್ತು ಮರಳು ಸಾಗಾಟ ನಡೆಸುತ್ತಿದ್ದರೂ ಅಧಿಕಾರಿಗಳು ಕಣ್ಮಚ್ಚಿ ಕುಳಿತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ನೆರವಿನಿಂದ ರಕ್ಷಿತ ಅರಣ್ಯದಿಂದಲೇ ಮರಗಳ ಲೂಟಿ ನಡೆಸಲಾಗುತ್ತಿದೆ. ದಿನಂಪ್ರತಿ ತಾಲೂಕಿನಿಂದ ನೂರಾರು ಮರದ ಲಾರಿಗಳು ಮಂಗಳೂರು ತಲುಪುತಿವೆ ಎಂದು ಕಿಡಿ ಕಾರಿದರು.
ಕಳೆದ ಆರು ತಿಂಗಳಿನಿಂದ ನಡೆದಿರುವ ಅಕ್ರಮ ಮರಳುಗಾರಿಕೆಯಿಂದ ಸರ್ಕಾರದ ಭೂಕ್ಕಸಕ್ಕೆ ಕೊಟ್ಯಾಂತರ ಹಣ ನಷ್ಟವಾಗಿದೆ. ಅಕ್ರಮ ಮಾಫಿಯವನ್ನು ತಡೆಗಟ್ಟುವಂತೆ ಹಲವು ಬಾರಿ ಉಪ ವಿಭಾಗಧಿಕಾರಿಗಳಿಗೆ ಮನವಿ ನೀಡಿದ್ದರು ಪ್ರಯೋಜನವಾಗಿಲ ಎಂದರು.
ಸಭೆಯಲ್ಲಿ ತಾಪಂ ಸದಸ್ಯ ಭವಾನಿ, ಸಾವಿತ್ರಮ್ಮ, ಬಾಸ್ಕರ್ ಶೆಟ್ಟಿ, ಡಿ.ಸಿ. ಸಣ್ಣಸ್ವಾಮಿ, ಎಚ್.ಎಚ್. ಉದಯ್, ರಘು, ತಿಪ್ಪೆಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement