ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಲೂಗಡ್ಡೆ ಮಾರಾಟ ಪ್ರಾರಂಭ

Rashmi Kasaragodu
Updated On : 8 May 2014, 1:14 am

ಹಾಸನ: ಜಿಲ್ಲೆಯಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟ ಬುಧವಾರದಿಂದ ಆರಂಭವಾಗಿದ್ದು, ರೈತರು ಮೊದಲ ದಿನವೇ ಆಲೂಗಡ್ಡೆ ಖರೀದಿಗೆ ಮುಂದಾಗಿದ್ದರು.
ಮೊದಲ ದಿನವೇ ರೈತರು ಆಲೂಗಡ್ಡೆ ಖರೀದಿ ಮಾಡಿದರು. ಒಂದು ಕ್ವಿಂಟಲ್ಗೆ ರು. 1,900 ನಿಂದ ರು. 2,000 ಬೆಲೆ ನಿಗದಿಯಾಗಿದ್ದು, ಆಲೂಗಡ್ಡೆ ಖರೀದಿ ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಮಾರಾಟದ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಗರದ ಕೃಷಿ ಉತ್ವನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಆವರಣದಲ್ಲಿ ವರ್ತಕರು ಬಿತ್ತನೆ ಆಲೂಗಡ್ಡೆಗೆ ಪೂಜೆ ಸಲ್ಲಿಸಿ ಮಾರಾಟಕ್ಕೆ ಚಾಲನೆ ನೀಡಿದರು. ಮೊದಲ ದಿನವೇ ಬಿತ್ತನೆ ಆಲೂಗಡ್ಡೆಯನ್ನು ಖರೀಸಿದಲು ರೈತರು ಮುಂದಾಗಿದ್ದು, ಜಿಲ್ಲೆಯ 8 ಶಿಥಲೀಕರಣ ಘಟಕಗಳಲ್ಲಿ 50 ಕೆಜಿಯುಳ್ಳ ಲಕ್ಷಾಂತರ ಚೀಲಗಳಲ್ಲಿ ಬಿತ್ತನೆ ಆಲೂಗಡ್ಡೆ ಶೇಖರಣೆಗೊಂಡಿದ್ದು, ಒಂದು ವಾರ ಅಥವಾ 10 ದಿನಗಳ ಒಳಗೆ ಶಿಥಲೀಕರಣ ಘಟಕಗಳಲ್ಲಿ ಶೇಖರಿಸಿರುವ ಬಿತ್ತನೆ ಆಲೂಗಡ್ಡೆ ಖಾಲಿಯಾಗಲಿದೆ ಎಂದು ಎಪಿಎಂಸಿ ಅವರು ಅಂದಾಜಿಸಿದ್ದಾರೆ.
ಜಿಲ್ಲೆಯ ರೈತರು ಸುಮಾರು ಮೂರ್ನಾಲ್ಕು ವರ್ಷಗಳಿಂದ ಆಲೂಗಡ್ಡೆ ಬೆಳೆ ಅಂಗಮಾರಿ ರೋಗಕ್ಕೆ ತುತ್ತಾಗಿ ನಷ್ಟವನ್ನು ಅನುಭವಿಸಿರುವುದರಿಂದ ಜಿಲ್ಲಾಡಳಿತವು ರೈತರ ಹಿತದೃಷ್ಟಿಯಿಂದ ಬಿತ್ತನೆ ಆಲೂಗಡ್ಡೆಯ ಗರಿಷ್ಠ ಬೆಲೆನ್ನು ನಿಗದಿ ಮಾಡಿದೆ.
ದರ ನಿಗದಿಯ ಸಭೆಯಲ್ಲಿ ವರ್ತಕರು ರು. 2,200 ಗಿಂತ ಕಡಿಮೆ ಬೆಲೆ ನೀಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದದ್ದರು. ಅದಕ್ಕೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ, ವರ್ತಕರು ಹೀಗೆ ತಮ್ಮ ಜಿಲ್ಲೆಯ ರೈತರ ಹಿತ ಮರೆತು ಲಾಭವೇ ಮುಖ್ಯ ಎಂಬಂತೆ ವರ್ತಿಸುವುದು ಸರಿಯಲ್ಲ ಎಂದು ಕಡಿಮೆ ಬೆಲೆಗೆ ಬಿತ್ತನೆ ಆಲೂಗಡ್ಡೆಯನ್ನು ರೈತರಿಗೆ ನೀಡಬೇಕು ಎಂದು ಸೂಚಿಸಿದ್ದರು. ಕೊನೆಗೆ 2 ಸಾವಿರ ರು.ಗಿಂತ ಕಡಿಮೆ ಬೆಲೆ ಮಾರಾಟ ಮಾಡಿದರೆ ನಷ್ಟ ಉಂಟಾಗಿದೆ. ಆದ್ದರಿಂದ ಜಿಲ್ಲಾಡಳಿತ ಸೂಚಿಸುವ ದರಕ್ಕೆ ಬಿತ್ತನೆ ಆಲೂಗಡ್ಡೆಯನ್ನು ನೀಡಲು ವರ್ತಕರು ಒಪ್ಪದ ಕಾರಣ ಕೂಡಲೇ ರು. 1,900 ನಿಂದ ರು. 2000 ಕ್ಕೆ ಮಾರಾಟ ಮಾಡಬೇಕು ಎಂದು ಡಿಸಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೆಲ ಕಡೆ ಆಲುಗೆಗಡ್ಡೆ ಖರೀದಿಸಲು ರೈತರು ಮುಗಿ ಬಿದ್ದಿದ್ದರು. ಕಳೆದ ಬಾರಿ ಕ್ವಿಂಟಲ್ಗೆ 1,400ಕ್ಕೆ ನೀಡಲಾಗಿತ್ತು. ಈ ಬಾರಿ ಬೆಲೆ ಹೆಚ್ಚಳ ಆಗಿರುವುದು ರೈತರ ಕೋಪಕ್ಕೆ ಕಾರಣವಾಗಿದೆ. ಅಲ್ಪ-ಸಲ್ಪ ಮಳೆರಾಯನ ಕೃಪೆ ಇರುವುದರಿಂದ ರೈತ ಸಲ್ಪ ಗೊಂದಲ ಮನಸ್ಸಿನಲ್ಲಿಯೇ ಆಲೂಗಡ್ಡೆ ಕೊಳ್ಳಲು ಮುಂದಾದರು. ಬಿತ್ತನೆ ಆಲೂಗಡ್ಡೆಯ ವಿತರಣೆ ಸಂದರ್ಭದಲ್ಲಿ ಎಪಿಎಂಸಿ ಸುತ್ತ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತವು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಒಟ್ಟಿನಲ್ಲಿ ರೈತರಿಗೆ ಯಾವ ರೀತಿ ಗುಣಮಟ್ಟದ ಬಿತ್ತನೆ ಆಲೂಗಡ್ಡೆ ಬೇಕು ಆ ಗುಣಮಟ್ಟದ ಆಲೂಗಡ್ಡೆಯನ್ನು ಖರೀಸಬಹುದಾಗಿದೆ. ಆಲೂಗಡ್ಡೆಯ ಖರೀದಿಯ ಜೊತೆಗೆ ಸರ್ಕಾರದ ವತಿಯಿಂದ ರೈತರಿಗೆ ಔಷಧಿಯನ್ನು ವಿತರಿಸಲಾಗುತ್ತಿದೆ. ನಿಜವಾದ ರೈತರಿಗೆ ಬಿತ್ತನೆ ಆಲೂಗಡ್ಡೆ ಲಭ್ಯವಾಗಬೇಕು ಎಂಬ ದೃಷ್ಟಿಯಿಂದ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಂಡಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement