ಕೆ-ಕಿಸಾನ್ ಯೋಜನೆ ಜಾರಿ
ಹಾಸನ: ಕೆ-ಕಿಸಾನ್(ಆನ್ಲೈನ್)ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಕಸಬಾ ಹೋಬಳಿಗಳ ವ್ಯಾಪ್ತಿಗೆ ಒಳಪಡುವ ರೈತರ ಭೂ ಹಿಡುವಳಿ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯವನ್ನು ಪ್ರಾರಂಭಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶಿವರಾಜ್ ತಿಳಿಸಿದ್ದಾರೆ.
ಕೃಷಿ ಇಲಾಖೆಯ ಪ್ರತಿನಿಧಿಗಳಾಗಿ ಅನುವುಗಾರರು ರೈತ ಮನೆಗಳಿಗೆ ಹೋಗಿ ಮಾಹಿತಿ ಸಂಗ್ರಹಿಸುತ್ತಾರೆ. ಅವರಿಗೆ ಇತ್ತೀಚಿನ ದಾಖಲಾತಿಗಳಾದ ಪಹಣಿ, ಪಟ್ಟಾ ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ, ಚುನಾವಣಾ ಗುರುತಿನ ಚೀಟಿ, ಆಧಾರ ಕಾರ್ಡ್, ರೇಷನ್ ಕಾರ್ಡ್ ಮತ್ತು ಭಾವಚಿತ್ರ ಒದಗಿಸಿ ಅವುಗಳ ಜೆರಾಕ್ಸ್ ಪ್ರತಿಯನ್ನು ನೀಡುವುದು ಅವಶ್ಯಕವಾಗಿದೆ. ಆದುದರಿಂದ ಈ ದಾಖಲಾತಿಗಳ ಜೆರಾಕ್ಸ್ ಪ್ರತಿಯನ್ನು ಮುಂಗಡವಾಗಿ ತೆಗೆದು ಇಟ್ಟುಕೊಳ್ಳಲು ಕೋರಿದೆ.
ಕೆ. ಕಿಸಾನ್ ಯೋಜನೆಗೆ ನೊಂದಣಿ ಮಾಡಿಕೊಂಡ ರೈತರಿಗೆ ಮಾತ್ರ ಸವಲತ್ತುಗಳನ್ನು ವಿತರಿಸಲು ಅವಕಾಶವಿರುವುದರಿಂದ ತಪ್ಪದೇ ಎಲ್ಲಾ ರೈತರೂ ನೊಂದಣಿ ಮಾಡಿಸಿಕೊಳ್ಳತಕ್ಕದ್ದು. ಮಾಹಿತಿಗಾಗಿ ಕಸಬಾ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದಾಗಿದೆ.