ಪುರಸಭೆ ವ್ಯಾಪ್ತಿಗೆ ಶೆಟ್ಟಿಹಳ್ಳಿ: ಶಾಸಕ ಬಾಲಕೃಷ್ಣ
ಚನ್ನರಾಯಪಟ್ಟಣ: ಪಟ್ಟಣಕ್ಕೆ ಹತ್ತಿರ ಇರುವ ಶೆಟ್ಟಿಹಳ್ಳಿ ಗ್ರಾಮ ಮುಂದಿನ ದಿನಗಳಲ್ಲಿ ಪುರಸಭೆಗೆ ಸೇರುತ್ತಿದ್ದು, ವಿಕಾಸ ಗ್ರಾಮ ಯೋಜನೆಯಡಿ ಗ್ರಾಮದ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಶೆಟ್ಟಿಹಳ್ಳಿ ಗ್ರಾಮದ ಶೆಟ್ಟಿಹಳಮ್ಮ ಉತ್ಸವದ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಗ್ರಾಮ ಸ್ಥರ ಮನವಿ ಸ್ವೀಕರಿಸಿ ಮಾತನಾಡಿ, ಗ್ರಾಮದಲ್ಲಿ ಆಗಬೇಕಾಗಿರುವ ಚರಂಡಿ, ರಸ್ತೆ, ಇನ್ನಿತರ ಕಾಮಗಾರಿಗಳ ಈ ಯೋಜನೆಯಡಿ ಪೂರ್ಣಗೊಳಿಸಲಾಗುತ್ತದೆ. ಹಾಗೂ ಬಹಳ ದಿನಗಳಿಂದ ನೆನೆ ಗುದಿಗೆ ಬಿದ್ದಿರುವ ಸಮುದಾಯ ಭವನ ವನ್ನೂ ಪೂರ್ಣಗೊಳಿಸಲಾಗುತ್ತದೆ ಎಂದರು. ಇಂದು ಕೆಲವು ಹಳ್ಳಿಗಳಲ್ಲಿ ಜಾತ್ರೆಯ ವೈಭವ ಕಡಿಮೆಯಾಗುತ್ತಿದೆ ಆದರೆ ನಿಮ್ಮ ಗ್ರಾಮದಲ್ಲಿ ಎಲ್ಲರೂ ಒಟ್ಟಾಗಿ ವಿಜೃಂಬಣೆಯಿಂದ ಜಾತ್ರೆ ಆಚರಿಸುತ್ತಿರು ದಕ್ಕೆ ಸಂತೋಷವಾಗುತ್ತಿದೆ ಎಂದರು.
ಶಾಸಕರಿಗೆ ಮನವಿ; ಗ್ರಾಮಸ್ಥರ ಹೆಚ್ಚು ಜಮೀನು, ಮೊರಾರ್ಜಿ ವಸತಿ ಶಾಲೆ, ಹೊರ ವರ್ತುಲ ರಸ್ತೆ, ಹೈಟೆಕ್ ನಂದಿನಿ ಹಾಲಿನ ಉತ್ಪನ್ನ ಘಟಕ ಮತ್ತು ಚತುಷ್ಫತ ರಸ್ತೆಗೆ ಆಕ್ರಮಿಸಿಕೊಳ್ಳಲಾಗಿದೆ. ಇದರಿಂದ ಕೆಲವರಿಗೆ ಜೀವನ ಮಾಡುವುದು ದುಸ್ಥರವಾಗಿದ್ದು ಇವರ ಬಗ್ಗೆ ಕಾಳಜಿ ವಹಿಸಬೇಕು ಎಂದು ಶಾಸಕರಿಗೆ ಹೇಳಿದರು. ಗ್ರಾಮಕ್ಕೆ ಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಅಹವಾಲು ಸಲ್ಲಿಸಿದರು.
ಎ ಒನ್ ಕೋಚಿಂಗ್ ಸೆಂಟರ್ ಉದ್ಘಾಟನೆ
ಹಾಸನ: ನಗರದ ಉತ್ತರ ಬಡಾವಣೆಯ ಅರಳೀಕಟ್ಟೆ ಸರ್ಕಲ್ನ ಎಂ.ಎನ್.ಕೆ. ಬಿಲ್ಡಿಂಗ್ನಲ್ಲಿ ಇತ್ತೀಚೆಗೆ ಎ.ಒನ್ ಕೋಚಿಂಗ್ ಸೆಂಟರ್ ಉದ್ಘಾಟನೆಯಾಯಿತು. ಸೆಂಟರ್ ಸದಸ್ಯ ವಿಶ್ವೇಶ್ವರ ಮಾತನಾಡಿ, ಸೆಂಟರ್ ಉತ್ತಮ ಧ್ಯೇಯದೊಂದಿಗೆ ಸ್ಥಾಪಿಸಿದ್ದೇವೆ. ಇಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರತಿ ಭಾನುವಾರ ತರಗತಿಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. ನಿವೃತ್ತ ಉಪಾಧ್ಯಾಯ ಶಿವಮೂರ್ತಿ ಮಾತನಾಡಿದರು. ಎ-ಒನ್ ಕೋಚಿಂಗ್ ಸೆಂಟರ್ ಸದಸ್ಯರು ಹಾಜರಿದ್ದರು.
ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ
ಹಾಸನ: ಅರಸೀಕೆರೆ ತಾಲೂಕಿನ ಗಂಡಸಿ-1 ಅಂಗನವಾಡಿ ಕೇಂದ್ರಕ್ಕೆ ಅಂಗನವಾಡಿ ಸಹಾಯಕಿ ಹುದ್ದೆ ಖಾಲಿ ಇದ್ದು, ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 31 ಕಡೆಯ ದಿನವಾಗಿದೆ. ಮಾಹಿತಿಗಾಗಿ ಅರಸೀಕೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರನ್ನು ಸಂಪರ್ಕಿಸಲು ಕೋರಿದೆ.
ಟಿಪ್ಪುಗೆ ಶ್ರದ್ಧಾಂಜಲಿ
ಸಕಲೇಶಪುರ: ಟಿಪ್ಪು ಸುಲ್ತಾನ್ ಹುತಾತ್ಮ ದಿನದ ಅಂಗವಾಗಿ ವೀರ ಕನ್ನಡಿಗ ಟಿಪ್ಪು ಸೇನೆವತಿಯಿಂದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಹಣ್ಣು ಹಂಪಲು ವಿತರಿಸಲಾಯಿತು. ಕ್ರಾಫರ್ಡ್ ಆಸ್ಪತ್ರೆಯ ಹೋರ ರೋಗಿ ಗಳಿಗೆ ಹಣ್ಣು-ಹಂಪಲ ವಿತರಿಸಿ ಟಿಪ್ಪು ಸುಲ್ತಾನ್ರವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವೀರಕನ್ನಡಿಗ ಟಿಪ್ಪು ಸೇನೆಯ ಕಾರ್ಯದರ್ಶಿ ನಯಾಝ್ ಪಾಷ, ನಾಗರೀಕ ಸಂರಕ್ಷಣಾ ಸಮಿತಿ ಕಾರ್ಯ ದರ್ಶಿ ಮಲ್ನಾಡ್ ಮೆಹಬೂಬ್, ಡಾ. ಇಂದುಶೇಖರ್, ಯಾದ್ಗಾರ್ ಅಹಮದ್ ಬಾವ, ಕ್ಯಾನಳ್ಳಿ ರವಿ ಇದ್ದರು.
ಎ. ಕೃಷ್ಣಪ್ಪ ಸ್ಮರಣೆ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣ್ಣಪ್ಪ ಸಾವಿರಾರು ಮಕ್ಕಳಿಗೆ ವಿದ್ಯಾದಾನ, ಧನಸಹಾಯ ಮಾಡಿ ದಾನಿಗಳಾಗಿದ್ದರು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಪರಮ ದೇವರಾಜೇಗೌಡ ಹೇಳಿದರು. ನುಗ್ಗೇಹಳ್ಳಿಯಲ್ಲಿ ಯಾದವ ಸಮಾಜದ ವತಿಯಿಂದ ನಡೆದ ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪನವರ ಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲಾ ಪಕ್ಷದ ಮುಖಂಡರ ವಿಸ್ವಾಸ ಪಡೆದು ಯಾರೊಂದಿಗೂ ಭಿನ್ನಾಭಿಪ್ರಾಯ ಇಟ್ಟುಕೊಂಡಿರಲಿಲ್ಲ. ತಳ ಹಂತದ ಜನ ಸೇವೆ ಮಾಡುವುದು ಕೃಷ್ಣಪ್ಪ ಅವರ ಕಾಯಕವಾಗಿತ್ತು ಎಂದರು. ಗೋಕುಲ ವಿದ್ಯಾ ಸಂಸ್ಥೆಯ ನಾರಾಯಣಮಾತನಾಡಿದರು. ಜಿಲ್ಲಾ ಯಾದವ ಸಮಾಜದ ಅಧ್ಯಕ್ಷ ಎಚ್.ಎಂ.ಮಲ್ಲೇಗೌಡ, ದೊರೆಸ್ವಾಮಿ, ಪುಟ್ಟರಾಮೇಗೌಡ, ಮೂರ್ತಪ್ಪ, ಮಲ್ಲಿಕಾರ್ಜುನಗೌಡ, ಅಂಗಡಿ ರಾಜಣ್ಣ, ಸತೀಶ ಇದ್ದರು.