ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾತ್ರೋರಾತ್ರಿ ಮಹಿಳೆ ಅಪಹರಣ

Rashmi Kasaragodu
Updated On : 8 May 2014, 1:12 am

ಹೊಳೆನರಸೀಪುರ: ತಾಲೂಕಿನ ಗುಡ್ಡೇನಹಳ್ಳಿ ಗ್ರಾಮದ ವೆಂಕಟಯ್ಯನವರ ಪತ್ನಿ ಗೌರಮ್ಮ ಮೊಮ್ಮಗಳು ಉಷಾ (23) ಅವರನ್ನು ರಾತ್ರಿ ಮಲಗಿದ್ದ ಸಮಯದಲ್ಲಿ ಬಲವಂತದಿಂದ ಅಪಹರಣ ಮಾಡಿದ್ದು ಇದುವರೆಗೆ ಪತ್ತೆಯಾಗಿಲ್ಲ.
5.4 ಅಡಿ ಎತ್ತರ, ದುಂಡು ಮುಖ, ಸಾಮಾನ್ಯ ಶರೀರ, ಎಣ್ಣೆಕೆಂಪು ಬಣ್ಣ, 12ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದು ಕನ್ನಡ ಮಾತನಾಡುತ್ತಾಳೆ, ಹಸಿರು ಬಣ್ಣದ ಚೂಡಿದಾರ ಧರಿಸಿದ್ದಳು. ಈ ಬಗ್ಗೆ ಮಾಹಿತಿ ದೊರೆತಲ್ಲಿ ಹಾಸನ ಆರಕ್ಷಕ ಅಧೀಕ್ಷಕರ ದೂರವಾಣಿ 08172-268410, ಜಿಲ್ಲಾ ನಿಸ್ತಂತು ವಿಭಾಗದ ದೂರವಾಣಿ 08172-268845 ಅಥವಾ ಹೊಳೆನರಸೀಪುರ ಆರಕ್ಷಕ ಉಪ ನಿರೀಕ್ಷಕರ ದೂ-08175-273308 ಸಂಪರ್ಕಿಸಿ.
ಯುವತಿ ನಾಪತ್ತೆ: ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಹಾಡ್ಯ ಗ್ರಾಮದ ಮಹದೇವ ಅವರ ಪುತ್ರಿ ಗಾಯಿತ್ರಿ (19)  ಮೇ 4ರಂದು ರಾತ್ರಿ 65 ಸಾವಿರ ಹಣ ಮತ್ತು 100 ಗ್ರಾಂ ಚಿನ್ನದ ಒಡವೆಗಳನ್ನು ತೆಗೆದುಕೊಂಡು ಮನೆಯಿಂದ ಕಾಣೆಯಾಗಿದ್ದಾಳೆ.
5 ಅಡಿ ಎತ್ತರ, ದುಂಡುಮುಖ, ಸಾದಾರಣ ಮೈಕಟ್ಟು, ಎಣ್ಣೆಕೆಂಪು ಬಣ್ಣ, ಮೊದಲ ವರ್ಷದ ಬಿ.ಎ. ವ್ಯಾಸಂಗ ಮಾಡಿದ್ದು ಪಿಂಕ್ ಕಲರ್ ಟಾಪ್ ಮತ್ತು ಕಾಫಿ ಕಲರ್ ಪ್ಯಾಂಟ್ ಧರಿಸಿದ್ದು ಕನ್ನಡ ಮಾತನಾಡುತ್ತಾಳೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ಹಾಸನ ಆರಕ್ಷಕ ಅಧೀಕ್ಷಕರ ದೂರವಾಣಿ 08172-268410, ಜಿಲ್ಲಾ ನಿಸ್ತಂತು ವಿಭಾಗದ ದೂರವಾಣಿ 08172-268845 ಅಥವಾ ಹೊಳೆನರಸೀಪುರ ಆರಕ್ಷಕ ಉಪ ನಿರೀಕ್ಷಕರ ದೂರವಾಣಿ ಸಂಖ್ಯೆ 08175-273308 ಸಂಪರ್ಕಿಸುವಂತೆ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement