ತೆರವು ಕಾರ್ಯಾಚರಣೆ ಮುಂದುವರಿಕೆ
ಸಕಲೇಶಪುರ: ಕಳೆದ ಭಾನುವಾರ ಹಳಿ ತಪ್ಪಿದ ಗೂಡ್ಸ್ ರೈಲಿನ ವ್ಯಾಗನ್ ತೆರವು ಕಾರ್ಯಾಚರಣೆ ಸತತ 5ನೇ ದಿನವೂ ಮುಂದುವರಿದಿದೆ.ಅರಸೀಕೆರೆ-ಮಂಗಳೂರು ಮಾರ್ಗ ಮಧ್ಯದ 87 ಮೈಲಿಯ ಶಿರವಾಗಿಲು ಸಮೀಪದ ಸುರಂಗಮಾರ್ಗದಲ್ಲಿ ಹಳಿತಪ್ಪಿದ 16 ರೈಲಿನ ವ್ಯಾಗನ್‌ಗಳಲ್ಲಿ ಇದುವರಗೆ 13 ವ್ಯಾಗನ್‌ಗಳನ್ನು ಹಳಿಗೆ ತರಲಾಗಿದ್ದು, ಸುರಂಗ ಮಾರ್ಗದಲ್ಲಿನ ಕತ್ತಲು ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗಿದೆ ಎಂದು ರೇಲ್ವೆ ಇಲಾಖೆ ಮೂಲಗಳು ತಿಳಿಸಿವೆ.