ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ
ಕ.ಪ್ರ.ವಾರ್ತೆ ಟಿ ಹಾಸನ ಟಿ ಮೇ 8
ಹಾಸನ ನಗರ ಸೇರಿದಂತೆ ಜಿಲ್ಲಾದಾದ್ಯಂತ ಗುರುವಾರ ದಾರಾಕಾರ ಮಳೆಯಾಗಿದ್ದು, ಜಿಲ್ಲಾದ್ಯಂತ ತಂಪೆರೆದಂತಾಗಿದೆ.
ಹಾಸನದಲ್ಲಿ ಬೆಳಗ್ಗೆಯಿಂದ ಪ್ರಾರಂಭವಾದ ಮಳೆಯು ಸಂಜೆವರೆಗೆ ಭಾರಿ ಗಾಳಿ ಸಹಿತ ಮಳೆಯಾಗಿದ್ದರಿಂದ ನಗರದ ನಾನಾ ಕಡೆಗಳಲ್ಲಿ ಮರಗಳು ಧರೆಗೆ ಉರಳಿ, ವಿದ್ಯುತ್ ಕಂಬಗಳ ತಂತಿಗಳು ಕಟ್ ಆಗಿ ಕೆಲವು ಸಮಯ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಮತ್ತೆ ಭಾರಿ ಗಾಳಿ ಉಂಟಾಗಿದ್ದರಿಂದ ಬೋರ್ಡ್ಗಳು, ಕಂಬಗಳು ಮುರಿದು ಬಿದ್ದ ಘಟನೆ ನಡೆದವು.
ರಸ್ತೆಗಳು ಖಾಲಿ: ಹಾಸನ, ಆಲೂರು, ಸಕಲೇಶಪುರ, ಚನ್ನರಾಯಪಟ್ಟಣ ಸೇರಿದಂತೆ ಜಿಲ್ಲಾದ್ಯಾಂತ ಬೆಳಗಿನಿಂದ ಸಂಜೆಯವರಿಗೆ ಭಾರಿ ಗಾಳಿ ಸಮೇತ ಮಳೆಯಾಗಿದ್ದು, ಇದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ವಾಯುಭಾರ ಕುಸಿತದಿಂದ ಕಂಡಿರುವ ಮಳೆಯಿಂದಾಗಿ ಜನತೆ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗ್ಗಿನಿಂದಲೇ ಮಂಕು ಕವಿದ ವಾತಾವರಣ ಇದ್ದರಿಂದ ಜನತೆಯ ಓಡಾಟ ಕಡಿಮೆಯಾಗಿತ್ತು. ನಂತರ ಮಳೆ ಪ್ರಾರಂಭದ ನಂತರ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು. ರಸ್ತೆಗಳಲ್ಲಿ ಜನ ಓಡಾಡದಿದ್ದ ಕಾರಣ ಬಹುತೇಕ ರಸ್ತೆಗಳು ಖಾಲಿಯಾಗಿದ್ದವು.
ರೈತರ ಆಶಯ: ಬೆಳಗಿನಿಂದ ಸುರಿದ ಭಾರಿ ಮಳೆ ಪರಿಣಾಮ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಈಗಾಗಲೇ ಜಿಲ್ಲೆಯಲ್ಲಿ ರೈತರು ಉಳುಮೆ ಕಾರ್ಯದಲ್ಲಿ ನಿರತರಾಗಿದ್ದು, ಈಗ ಮತ್ತೆ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆಯಲ್ಲಿ ಚುರುಕುಕೊಂಡಿದ್ದಾರೆ.
ಈ ಬಾರಿ ಇದೇ ರೀತಿ ಉತ್ತಮ ಮಳೆಯಾದರೆ ವ್ಯವಸಾಯಕ್ಕೆ ಅನುಕೂಲವಾಗಲಿದೆ ಎಂಬ ಭಾರೀ ನಿರೀಕ್ಷೆಯನ್ನು ರೈತರು ಹೊಂದಿದ್ದಾರೆ.