ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಿರುಗಾಳಿ, ಮಳೆಯಿಂದ ಮನೆಗಳಿಗೆ ಹಾನಿ

Rashmi Kasaragodu
Updated On : 9 May 2014, 12:05 pm

ಹೊಳೆನರಸೀಪುರ: ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಸುತ್ತಮುತ್ತ ಇತ್ತೀಚೆಗೆ ಬಿರುಗಾಳಿ ಸಮೇತ ಬಿದ್ದ ಮಳೆಯಿಂದ ಗ್ರಾಮದಲ್ಲಿನ ಅನೇಕ ಮನೆಗಳ ಹೆಂಚು ಮತ್ತು ತಗಡಿನ ಶೀಟುಗಳು ಗಾಳಿಗೆ ತೂರಿ ಹೋಗಿರುವುದಲ್ಲದೇ, ಅನೇಕ ಮನೆಗಳ ಗೋಡೆಗಳು ನೆಲಕ್ಕೆ ಕುಸಿದು ಭಾರಿ ನಷ್ಟಕ್ಕೆ ಕಾರಣವಾಗಿದೆ.
ಹೊನ್ನೇನಹಳ್ಳಿ ಗ್ರಾಮದ ಮೀನಾಕ್ಷಿ ಎಂಬುವವರ ಮನೆಯ ಛಾವಣಿಗೆ ಹೊದಿಸಿದ್ದ ಸುಮಾರು ಐದು ನೂರಕ್ಕು ಹೆಚ್ಚು ಮಂಗಳೂರು ಹೆಂಚುಗಳು ಹಾಗೂ ತಗಡಿನ ಶೀಟುಗಳು ಗಾಳಿಗೆ ಸಿಲುಕಿ ಹಾರಿ ಹೋಗಿರುವುದಲ್ಲದೇ, ಮನೆಯಲ್ಲಿದ್ದ ಮಿನಾಕ್ಷಿ ಅವರ ತಲೆಗೆ ಹೆಂಚು ಬಡಿದು ಬಲವಾದ ಪೆಟ್ಟು ಬಿದ್ದಿದೆ. ಮಳೆ ಹಾಗೂ ಬಿರುಗಾಳಿಯಿಂದಾಗಿ ಗ್ರಾಮದ ಅನೇಕ ಮನೆಗಳು ಜಖಂಗೊಂಡಿದ್ದು ಭಾರಿ ನಷ್ಟಕ್ಕೆ ಕಾರಣವಾಗಿದ್ದು ಮಳೆಯಿಂದ ಆಗಿರುವ ನಷ್ಟಕ್ಕೆ ತಾಲೂಕು ಆಡಳಿತ ಪರಿಹಾರ ನೀಡುವಂತೆ ಗ್ರಾಮದ ಜನತೆ ಆಗ್ರಹಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement