ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಾಸವಿ ಸಪ್ತಾಹ- ಜಯಂತಿ ಇಂದು

Rashmi Kasaragodu
Updated On : 9 May 2014, 12:03 pm

ಹೊಳೆನರಸೀಪುರ: ಇಲ್ಲಿನ ಆರ್ಯವೈಶ್ಯ ಮಂಡಳಿಯು ತನ್ನ ಸಹ ಸಂಘಗಳ ಸಂಯುಕ್ತಾಶ್ರಯದಲ್ಲಿ ಮೇ 9ರಂದು ವಾಸವಿ ಸಪ್ತಾಹ ಮತ್ತು ಶ್ರೀವಾಸವಿ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಕೆ.ಎನ್. ಅರುಣ್ ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿದ ಅವರು ಮೇ 9ರಂದು ಶ್ರೀವಾಸವಿ ಜಯಂತಿ ನಡೆಯಲಿದ್ದು, ಅಂದು ಬೆಳಗಿನಿಂದಲೇ ಇಲ್ಲಿನ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಬೆಳಿಗ್ಗೆ 7 ಗಂಟೆಗೆ ಪವಿತ್ರ ಹೇಮಾವತಿ ನದಿಯಿಂದ ಪಂಚ ಕನ್ಯೆಯರಿಂದ ಕಲಶಗಳನ್ನು ತಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 8ಗಂಟೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಹಾಲು ಬ್ರೆಡ್ ವಿತರಣೆ ನಡೆಯಲಿದೆ. 9 ಗಂಟೆಗೆ  ಕನ್ನಿಕಾಪರಮೇಶ್ವರಿ ಅಮ್ಮನವರ ವಿಗ್ರಹಕ್ಕೆ 108 ಲೀಟರ್ ಹಾಲಿನ ಅಭಿಷೇಕ ಹತ್ತು ಗಂಟೆಗೆ ವಾಸವಿ ಹೋಮ ನಡೆಸಲಿದ್ದು, ಪೂರ್ಣಾಹುತಿ ಅಷ್ಟಾವಧಾನ ನಂತರ ಮಹಾಮಂಗಳಾರತಿ ನಡೆಯಲಿದೆ ಎಂದು ವಿವರ ನೀಡಿದರು.
ಆರ್ಯವೈಶ್ಯ ಮಂಡಳಿಯ ಅಂಗ ಸಂಸ್ಥೆಗಳಿಂದ ಸಂಜೆ ಶ್ರೀಕನ್ನಿಕಾಪರಮೇಶ್ವರಿ ಅಮ್ಮನವರ ವಿಗ್ರಹವನ್ನು ಮುತ್ತಿನಮಂಟಪದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ.
ಶ್ರೀವಾಸವಿ ಜಯಂತಿ ಪ್ರಯುಕ್ತ ಮೇ 3ರಿಂದ ನಿತ್ಯ ಸಂಜೆ ದೇವಾಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದಿರುವ ಅವರು, ವಾಸವಿ ಜಯಂತಿ ದಿನವಾದ ಮೇ 9ರಂದು ಶುಕ್ರವಾರ ಆರ್ಯವೈಶ್ಯ ಕುಲದ ವರ್ತಕರು ಸ್ವಯಂ ರಜೆ ಘೋಷಿಸಲಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement