ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅವ್ಯವಸ್ಥೆ ಆಗರವಾದ ಯುಜಿಡಿ

Rashmi Kasaragodu
Updated On : 9 May 2014, 11:21 am

ಅರಸೀಕೆರೆ: ಪುರಸಭಾ ಆಡಳಿತ ಕೈಗೆತ್ತಿಕೊಂಡಿರುವ ಯುಜಿಡಿ ಸಂಪರ್ಕ ವ್ಯವಸ್ಥೆ ಅವ್ಯವಸ್ಥೆಯ ಆಗರವಾಗಿದೆ.
ನಾಗರಿಕರ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದ ಬಹುತೇಕ 27 ವಾರ್ಡ್ಗಳ ಪೈಕಿ ಕಾಮಗಾರಿ ಕೆಲವು ವಾರ್ಡ್ಗಳಲ್ಲಿ ಪೂರ್ಣಗೊಂಡಿದ್ದರೆ ಮತ್ತೆ ಕೆಲವು ವಾರ್ಡ್ಗಳಲ್ಲಿ ಪ್ರಗತಿಯಲ್ಲಿದೆ. ಆದರೆ, ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಲಕ್ಷ್ಮೀಪುರ, ಮಾರುತಿನಗರ ಮಲ್ಲೆಶ್ವರ ನಗರ ಬಡಾವಣೆ, ಅಂಚೆಕೊಪ್ಪಲು ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ರಸ್ತೆಗಳನ್ನು ಅಗೆದು ಬಿಟ್ಟಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ಪಾದಚಾರಿಗಳು, ವಾಹನ ಸವಾರರು ಅವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕತೊಡಗಿದ್ದಾರೆ.
ಮಾರುತಿ ನಗರದ ನಿವೃತ್ತ ನೌಕರರ ಸಂಘದ ಕಚೇರಿಯ ಬಳಿ ಮಣ್ಣನ್ನು ಅಗೆದು ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ತೀವ್ರ ತೊಂದರೆ: ಶಾಸಕ ಕೆ.ಎಂ. ಶಿವಲಿಂಗೇಗೌಡರ ಮನೆಯ ಕೆಳಭಾಗದ ರಸ್ತೆಯಲ್ಲೂ ಇದೇ ರೀತಿ ಒಬ್ಬರು ತಿರುಗಾಡುವಷ್ಟು ಜಾಗವನ್ನೂ ಬಿಡದೇ ಮಣ್ಣನ್ನು ಹಾಕಿರುವುದರಿಂದ ಅವರು ನಗರದ ಸಂಪರ್ಕವನ್ನೇ ಕಳೆದುಕೊಳ್ಳುವಂತಾಗಿದೆ. ವಾಹನಗಳು ನಿಂತಲ್ಲೇ ನಿಲ್ಲುವಂತಹ ಪರಿಸ್ಥಿತಿ ಇದ್ದು ತ್ವರಿತಗತಿಯಲ್ಲಿ ಕಾಮಗಾರಿ ನಡೆಯದ ಕಾರಣ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಯಾರೂ ಗಮನಹರಿಸಿಲ್ಲ: ಗುತ್ತಿಗೆದಾರರು ಹೈದರಾಬಾದ್ ಮೂಲದವರರಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಕಾಮಗಾರಿ ಆರಂಭಗೊಂಡು ವರ್ಷಗಳೇ ಕಳೆಯತೊಡಗಿದ್ದು ಇತ್ತ ತಲೆ ಹಾಕಿಲ್ಲ. ಪುರಸಭಾ ಎಂಜಿನಿಯರ್ಗಳಾಗಲೀ ಸಂಬಂಧಿಸಿದ ಅಧಿಕಾರಿಗಳಾಗಲಿ ಗಮನ ಹರಿಸದ ಪರಿಣಾಮ ನಾಗರಿಕರು ಸಮಸ್ಯೆ ಅನುಭವಿಸುವಂತಾಗಿದೆ.
ಕಾಮಗಾರಿ ನಡೆಯುತ್ತಿರುವ ಸ್ಥಳದಿಂದ ಕನಿಷ್ಠ 50 ಮೀ. ದೂರದಲ್ಲಾದರೂ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸೂಚನಾಫಲಕ ಹಾಕಬೇಕು ಎಂಬ ಸಾಮಾನ್ಯ ಜ್ಞಾನ ಅಧಿಕಾರಿಗಳಿಗಾಗಲಿ ಗುತ್ತಿಗೆದಾರರಿಗಾಗಲಿ ಅಥವಾ ಮೇಲ್ವಿಚಾರಕರಿಗಾಗಲಿ ಇಲ್ಲದಿರುವುದು  ಬೇಸರದ ಸಂಗತಿಯಾಗಿದೆ.
ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸದಿದ್ದರೆ ಪುರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement