'ಅಹಿಂಸೆ ಪಾಲಿಸಿ'
ಬೇಲೂರು: ಶಿಸ್ತು, ಪ್ರಾಮಾಣಿಕತೆ, ಅಹಿಂಸೆಯನ್ನು ಪ್ರತಿಯೊಬ್ಬರೂ ಪಾಲಿಸಿ ದೇಶಕ್ಕೆ ಒಳ್ಳೆಯ ಹೆಸರು ಕೀರ್ತಿ ತರಬೇಕು ಎಂದು ಸಾಹಿತಿ ಬೇಲೂರು ಕೃಷ್ಣಮೂರ್ತಿ ಹೇಳಿದರು. ನಾ.ಸು. ಹರ್ಡೀಕರ್ರವರ 125ನೇ ಜಯಂತಿಯ ಅಂಗವಾಗಿ ಇತ್ತೀಚೆಗೆ ಪಟ್ಟಣದ ದೇವಸ್ಥಾನ ರಸ್ತೆಯಲ್ಲಿರುವ ಹರ್ಡೀಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಸೇವಾದಳದ ಜಿಲ್ಲಾ ಸಂಘಟಕರಾದ ರಾಣಿ, ಹಿರಿಯ ಪ್ರಮುಖರಾದ ಎಚ್.ಎಮ್. ಶಿವಣ್ಣ, ವೆಂಕಟೇಶ್, ಕುಮಾರಸ್ವಾಮಿ ಇದ್ದರು.