ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಏತನೀರಾವರಿ ಅಡಚಣೆಗೆ ಶೀಘ್ರ ಪರಿಹಾರ

Rashmi Kasaragodu
Updated On : 9 May 2014, 11:12 am

ಬೇಲೂರು: ಹಳೇಬೀಡು ಮತ್ತು ಮಾದೀಹಳ್ಳಿ ಹೋಬಳಿಗೆ ಯಗಚಿ ಜಲಾಶಯದಿಂದ ಏತನೀರಾವರಿ ಪ್ರಾಯೋಗಿಕವಾಗಿ 12 ಕೆರೆಗಳಿಗೆ ನೀರನ್ನು ಬಿಡಲಾಗಿದೆ. ಆದರೆ ಹಗರೆಯಿಂದ ಹಳೇಬೀಡು ಮತ್ತು ಅಡಗೂರು ಮಾರ್ಗಕ್ಕೆ ಹರಿಯುವ ಮಧ್ಯೆ ಅರಣ್ಯ ಇಲಾಖೆ ಸಂಬಂಧಪಟ್ಟ ಭೂಮಿಯಿಂದ ಕಾಮಗಾರಿಗೆ ಅಡ್ಡಿಯಾಗಿದೆ ಎಂದು ಶಾಸಕ ವೈ,ಎನ್. ರುದ್ರೇಶಗೌಡ ತಿಳಿಸಿದರು.
ತಾಲೂಕಿನ ಹೆಬ್ಬಾಳಿನಲ್ಲಿ ಇತ್ತೀಚೆಗೆ ನಡೆದ ನೂತನ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ,  ಅರಣ್ಯ ಇಲಾಖೆಗೆ ದುದ್ದ ಸಮೀಪದಲ್ಲಿ ಭೂಮಿ ನೀಡಲಾಗಿದೆ. ಆದರೂ ಇನ್ನು ಸಮಸ್ಯೆ ಬಗೆಹರಿದಿಲ್ಲ, ನಾನು ಇಂದು ಬೆಂಗಳೂರಿಗೆ ಈ ವಿಷಯದ ಚರ್ಚೆ ಮಾಡುವ ನಿಟ್ಟಿನಲ್ಲಿ ಹೊರಟಿದ್ದು, ಶೀಘ್ರವೇ ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ ಎಂದರು.
ಏತನೀರಾವರಿ ಯೋಜನೆ 36 ಕೆರೆಗಳನ್ನು ತುಂಬಿಸುವ ಮಹತ್ವ ಪೂರ್ಣ ಯೋಜನೆಯಾಗಿದ್ದು, ಕೆಲ ವಿಪಕ್ಷಗಳು ಈ ಯೋಜನೆ ಬಗ್ಗೆ ಅಪಸ್ವರ ಎತ್ತಿದ್ದಾರೆ. ಆದರೆ ಕಾಮಗಾರಿ ಶೇ. 80 ಭಾಗ ಮುಕ್ತಾಯವಾಗಿದೆ. ಸಂಪೂರ್ಣವಾಗಿ ಕೆಲಸ ಮುಕ್ತಾಯ ಮಾಡಿ ಉದ್ಘಾಟನೆಗೆ ವಿಪಕ್ಷಗಳಿಗೆ ಅಹ್ವಾನ ನೀಡಲಾಗುತ್ತದೆ ಎಂದು ಅವರು ಛೇಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement