ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೀರಿನ ಸಮಸ್ಯೆ ಪರಿಶೀಲಿಸಿದ ಉಸ್ತುವಾರಿ ಕಾರ್ಯದರ್ಶಿ

Rashmi Kasaragodu
Updated On : 9 May 2014, 11:17 am

ಜಾವಗಲ್: ಜಾವಗಲ್ ಹೋಬಳಿಯ ಅರಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಕ್ಕಲಿಂಗನಹಳ್ಳಿ, ಚಿಕ್ಕಜ್ಜಿಕಟ್ಟೆಹಳ್ಳಿ ಹಾಗೂ ತಾವರೆಹಳ್ಳಿಗ್ರಾಮಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ. ಕುಮಾರ್ ನಾಯಕ್ ಭೇಟಿ ನೀಡಿ ಪರಿಶೀಲಿಸಿದರು.
    ಗ್ರಾಮಗಳಲ್ಲಿ ಕೊರೆಸಿರುವ ಕೊಳವೆ ಬಾವಿಗಳು ನೀರು ಇಲ್ಲದೆ ವಿಫಲವಾಗಿರುವ ಬಗ್ಗೆ ಗ್ರಾಮಸರಿಂದ ಮಾಹಿತಿ ಪಡೆದು, ತಾವರೆಹಳ್ಳಿ, ಚಿಕ್ಕಲಿಂಗನಹಳ್ಳಿ ದಾಸರಹಟ್ಟಿ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದನ್ನು ವೀಕ್ಷಿಸಿದರು.  ತಾವರೆಹಳ್ಳಿ ಕೊಳವೆ ಬಾವಿಯಲ್ಲಿ ಅಲ್ಪಸ್ವಲ್ಪ ನೀರು ಇರುವುದರಿಂದ  ಸದರಿ ಕೊಳವೆ ಬಾವಿಯನ್ನು ಆಳವಾಗಿ ಕೊರೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾವರೆಹಳ್ಳಿ, ಚಿಕ್ಕಲಿಂಗನಹಳ್ಳಿ ದಾಸರಹಟ್ಟಿ ಗ್ರಾಮಗಳ ಸುತ್ತ ನೀರು ಸಿಗುವ ಉತ್ತಮ ಸ್ಥಳವನ್ನು ಆಯ್ಕೆಮಾಡಿಕೊಂಡು ಕೊಳವೆ ಬಾವಿಗಳನ್ನು ಕೊರೆಸಿ ನೀರು ಸರಬರಾಜು ವ್ಯವಸ್ಥೆ ಮಾಡುವಂತೆ ತಿಳಿಸಿದರು. ಜಿಲ್ಲಾಧಿಕಾರಿ ಅನ್ಬುಕುಮಾರ್, ಜಿಪಂ ಸಿಇಒ ಉಪೇಂದ್ರ ಪ್ರತಾಪ್ ಸಿಂಗ್, ಉಪವಿಭಾಗಾಧಿಕಾರಿ ಶರತ್, ಜಿಪಂ ಕಾರ್ಯಕಾರಿ ಎಂಜಿನಿಯರ್ ನಾಗರಾಜು, ಸಹಾಯಕ ಕಾರ್ಯಕಾರಿ ಎಂಜಿನಿಯರ್ ಶೇಖರಪ್ಪ, ಅರಸೀಕೆರೆ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ  ಟಿ.ಎನ್. ಮೂರ್ತಿ, ಚಿಕ್ಕಜ್ಜಿಕಟ್ಟೆಹಳ್ಳಿ ಧರ್ಮಪ್ಪ ಹಾಗೂ ಗ್ರಾಮಸ್ಥರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement