ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಹರ್ಷಿ ಭಗೀರಥ ಜಯಂತ್ಯುತ್ಸವ

Rashmi Kasaragodu
Updated On : 9 May 2014, 11:16 am

ಹಾಸನ: ಮಾನವ ಕುಲಕೋಟಿಗೆ ಒಳಿತನ್ನು ಬಯಸಿದ ಮಹರ್ಷಿ ಭಗೀರಥನ ತತ್ತ್ವಾದರ್ಶಗಳನ್ನು ಇಂದು ನಾವೆಲ್ಲರೂ ಪಾಲಿಸಬೇಕು. ನಾವೂ ಅವರಂತೆ ವಿಶಾಲವಾದ ಚಿಂತನೆ ನಡೆಸಬೇಕು. ಭಗೀರಥ ಮಾನವೀಯ ಮೌಲ್ಯಗಳ ಹರಿಕಾರ ಎಂದು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಎಸ್.ಜೆ. ನೀಲಪ್ಪ ಹೇಳಿದರು.
ಅವರು ನಗರದ ಮಹಾವೀರ ಭವನದ ಮುಂಭಾಗದ ನಿರ್ಮಾಣ ಹಂತದಲ್ಲಿರುವ ಉಪ್ಪಾರ ಸಮುದಾಯಭವನದಲ್ಲಿ ಹಮ್ಮಿಕೊಡಿದ್ದ ಮಹರ್ಷಿ ಭಗೀರಥ ಜಯಂತ್ಯುತ್ಸವದಲ್ಲಿ  ಭಗೀರಥ ಸ್ವಾಮಿಗೆ ಪುಷ್ಪಾರ್ಪನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಭಗೀರಥ ಉಪ್ಪಾರ ಜನಾಂಗದ ಮೂಲಪುರುಷ. ಅವರ ವಂಶಪರಾಂಪರ್ಯದಲ್ಲಿ ಹುಟ್ಟಿದ ಉಪ್ಪಾರ ಜನಾಂಗ ಸಾಮಾಜಿಕವಾಗಿ ಹಿಂದೆ ಬಿದ್ದಿದೆ ಎಂದು ಅವರು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಭೋಜೇಗೌಡ, ಖಜಾಂಜಿ ಸಣ್ಣೇಗೌಡ, ರಾಮೇಗೌಡ, ಕಿಂಡಿಪುರದ ಗ್ರಾಮಸ್ಥಾರು, ಬಲ್ಲೇನಹಳ್ಳಿ ಗ್ರಾಮಸ್ಥರು, ಯಲಗೌಡನಹಳ್ಳಿ ಗ್ರಾಮಸ್ಥರು ಹಾಗೂ ಹಾಸನ ನಗರದ ಉಪ್ಪಾರ ಜನಾಂಗದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement