ಮುಸ್ಲಿಂ ಸಮುದಾಯಸಭೆ ನಾಳೆ
ಹಾಸನ: ಪಟ್ಟಣದ ಸುನ್ನಿ ಜಾಮಿಯಾ ಮಸೀದಿಯಲ್ಲಿ ಮೇ 11ರ ಭಾನುವಾರ ಮಧ್ಯಾಹ್ನ 2ಕ್ಕೆ ಸುನ್ನಿ ಮುಸ್ಲಿಂ ಜಮಾತ್ ಕಮಿಟಿಗೆ ಹೊಸ ಪದಾಧಿಕಾರಿಗಳನ್ನು ನೇಮಿಸಲು ಸುನ್ನಿ ಮುಸ್ಲಿಂ ಸಮುದಾಯದವರ ಸಭೆಯನ್ನು ಕರೆಯಲಾಗಿದೆ.
ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮುಖ್ಯಸ್ಥರಾದ ಅಲ್ಹಜ್ ಸೈಯದ್ ಖಾಸೀಮ್ ಸಾಹೇಬ್ ಹಾಗೂ ಉಪ ಛೇರ್ಮನ್ ಆದ ಜನಾಬ್ ಅಯಬ್ ಬಾಷ ಈ ಬಗ್ಗೆ ಪ್ರಕಟಣೆ ಮಾಡಿದ್ದಾರೆ.