ಸಮ್ಮೇಳನ ಉದ್ಘಾಟನೆ
ಹಾಸನ: ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಇತ್ತೀಚೆಗೆಎರಡು ದಿನಗಳ ಮಲ್ಟಿಮೀಡಿಯಾ ಟೆಕ್ನಾಲಜಿ ಮತ್ತು ಕಮ್ಯುನಿಕೇಷನ್ ಸಿಸ್ಟಮ್ (ಃಈಂಖಿಈಖ) ಎಂಬ ರಾಷ್ಟ್ರೀಯ ಸಮ್ಮೇಳನವನ್ನು ಇತ್ತೀಚೆಗೆ ಆಯೋಜಿಸಿದ್ದು, ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಅಲ್ಯುಮ್ನಿ ಹಾಲ್ನಲ್ಲಿ ಉದ್ಘಾಟನೆಗೊಂಡಿತು.
ಎರಡು ದಿನದ ಸಮ್ಮೇಳನದ ಉದ್ದೇಶವನ್ನು ಮುಖ್ಯ ಸಂಯೋಜಕ ಡಾ. ಬಿ. ರಮೇಶ್ ಬೋಧಕರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ, ಸ್ನಾತಕೋತ್ತರ ಪದವೀಧರರಿಗೆ, ಪದವೀದರರಿಗೆ, ವಿದ್ಯಾರ್ಥಿಗಳಿಗೆ ಮತ್ತು ಕೈಗಾರಿಕಾ ಉದ್ಯಮಿಗಳಿಗೆ ಇತ್ತೀಚಿನ ದಿನಗಳಲ್ಲಿ ಮಲ್ಟಿಮೀಡಿಯಾ ಟೆಕ್ನಾಲಜಿ ಮತ್ತು ಕಮ್ಯುನಿಕೇಷನ್ ಸಿಸ್ಟಮ್ಸ್ನಲ್ಲಿ ಕಂಡುಕೊಳ್ಳಲಾದ ವೈಜ್ಞಾನಿಕ ಬೆಳವಣಿಗೆ ಮತ್ತು ಸಂಶೋಧನೆಗಳನ್ನು ಚರ್ಚಿಸಲು ಒಂದು ಅತ್ಯುತ್ತಮ ವೇದಿಕೆ ಎಂದು ಮಾಹಿತಿ ನೀಡಿದರು.
ಅಭಿಪ್ರಾಯ: ಪೂನಾದ ಉಐಆಖಿ ಉಜಜಟಜಜ ್ಖಟ್ಝಿಢಜ್ಠಡ್ಝಡಿಣ ಯ ಮಾಜಿ ಉಪಕುಲಪತಿ ಡಾ. ಎಲ್.ಎನ್. ಪಟ್ನಾಯಕ್ ಮಾತನಾಡಿ, ಮುಂದೊಂದು ದಿನ ನಾವು ವೈರ್ಲೆಸ್ ತಂತ್ರಜ್ಞಾನಕ್ಕೆ ಮೊರೆಹೋಗುವುದು ಅನಿವಾರ್ಯವಾಗಬಹುದು. ಈ ಬಗ್ಗೆ ಅವಶ್ಯವಿರುವ ತಂತ್ರಜ್ಞಾನದ ತಿಳುವಳಿಕೆ ಹೊಂದುವುದು ಇಂದಿನ ಮುಖ್ಯ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಶಯ: ಕುವೆಂಪು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ಕೆ. ಚಿದಾನಂದ ಗೌಡರು ಮಾತನಾಡಿ, ಇಂದಿನ ತಂತ್ರಜ್ಞಾನ ಮಾನವನ ಮೇಲೆ ದುಷ್ಪರಿಣಾಮ ಬೀರಿದೆ. ಮುಂದೊಂದು ದಿನ, ಮಾನವ ತನ್ನ ಸ್ವಾತಂತ್ರ್ಯವನ್ನು ತಾನೇ ಕಳೆದುಕೊಂಡು ನೆಟ್ವರ್ಕಿಂಗ್ ತಂತ್ರಜ್ಞಾನ ಅಡಿಯಾಳಾಗಬಹುದೇನೋ ಎಂಬ ಸಂಶಯ ವ್ಯಕ್ತಪಡಿಸಿದರು. ಪ್ರೊ.ಬಿ.ಬಿ. ನೀಲಕಂಠಪ್ಪ, ಪ್ರೊ. ಚಂದ್ರಿಕಾ, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಖಜಾಂಚಿ ಆರ್. ಶೇಷಗಿರಿ, ಡಾ.ವಿ. ನಾರಾಯಣ ಇತರರು ಇದ್ದರು.
ಪ್ರಶಸ್ತಿಗೆ ಅರ್ಜಿ ಆಹ್ವಾನ
ಹಾಸನ: 2013-14ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಗಾಗಿ ಕೃಷಿ ವಲಯದಲ್ಲಿ ಗಮನಾರ್ಹ ಹಾಗೂ ವಿಭಿನ್ನ ಸಾಧನೆಗೈದ ರಾಜ್ಯದ ವ್ಯಕ್ತಿಗಳಿಂದ ಕೃಷಿ ಪಂಡಿತ ಪ್ರಶಸ್ತಿಯನಾಮ ನಿರ್ದೇಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ, ರಾಜ್ಯ ಸರ್ಕಾರ ಅಥವಾ ಅಂಗ ಸಂಸ್ಥೆಗಳಿಂದ ಈ ಸಾಧನೆಗೆ ಈಗಾಗಲೇ ಪುರಸ್ಕೃತರಾದವರು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಂಗ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ಸೇವೆ ಸಲ್ಲಿಸಿ ನಿವೃತ್ತರಾದವರು ಈ ಪ್ರಶಸ್ತಿಗೆ ಅರ್ಹರಲ್ಲ. ಪ್ರಶಸ್ತಿಯ ವಿವರ ಮತ್ತು ಅರ್ಜಿ ನಮೂನೆಗಳನ್ನು ಸಂಬಂಧಿತ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, ತಾಲೂಕು ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರಗಳಿಂದ ಪಡೆಯಬಹುದು. ನಾಮ ನಿರ್ದೇಶನ ಪತ್ರಗಳನ್ನು ಕಡ್ಡಾಯವಾಗಿ ಆಯಾ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, ಕೃಷಿ ವಿಶ್ವವಿದ್ಯಾನಿಲಯಗಳ ತಜ್ಞರ ಶಿಫಾರಸಿನೊಂದಿಗೆ ಜಂಟಿ ಕೃಷಿ ನಿರ್ದೇ ಶಕರು (ವಿಸ್ತರಣೆ ಮತ್ತು ತರಬೇತಿ), ಕೃಷಿ ಇಲಾಖೆ, ಶೇಷಾದ್ರಿ ರಸ್ತೆ, ಬೆಂಗಳೂರು - 560001 ಇವರಿಗೆ ಮೇ 31ರೊಳಗೆ ತಲುಪುವಂತೆ ಕಳುಹಿಸಲು ಕೋರಿದೆ. ತಡವಾಗಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಇಲಾಖೆ ವೆಬ್ಸೈಟ್ ಡಿಡಿಠ.್ಠಛ್ಝಡಿಛಟ್ಝಡ್ಠಿಛ.್ಞಛ್ಠ.ಟ್ಝ್ಛಿ.್ಝಟಿ ಪ್ರಕಟಣೆ ಮೆನುವಿನಿಂದ ಕೃಷಿ ಪಂಡಿತ ಪ್ರಶಸ್ತಿ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರನ್ನಾಗಲಿ ಅಥವಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.