ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಲೂ ಬೆಳೆಗೆ ಉಚಿತ ಜೈವಿಕ ಗೊಬ್ಬರ

Rashmi Kasaragodu
Updated On : 12 May 2014, 1:12 am

ಅರಕಲಗೂಡು: 2014-15ನೇ ಸಾಲಿನ ಮುಂಗಾರು ಬಿತ್ತನೆ ಆಲೂಗಡ್ಡೆಯು ಹಾಸನದ ಎ.ಪಿ.ಎಂ.ಸಿ ಯಲ್ಲಿ ಮಾರಾಟವಾಗುತ್ತಿದ್ದು, ರೈತರಿಗೆ ಆಲೂಗಡ್ಡೆ ಖರೀದಿ ಸ್ಥಳದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಉಚಿತವಾಗಿ ಜೈವಿಕ ಗೊಬ್ಬರವನ್ನು ಹಾಗೂ ಶೇ. 5ರ ರಿಯಾಯಿತಿ ದರದಲ್ಲಿ ಸಸ್ಯ ಸಂರಕ್ಷಣಾ ಔಷಧಿಗಳನ್ನು ವಿತರಿಸಲಾಗುತ್ತಿದೆ.
ಆಲೂಗಡ್ಡೆ ವಿಶೇಷ ಪ್ಯಾಕೇಜ್ ಯೋಜನೆಯಡಿಯಲ್ಲಿ ಸಹಾಯಧನ ಪಡೆಯಲು ಎ.ಪಿ.ಎಂ.ಸಿ ಹಾಸನದಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ರೈತರು ಈ ಎಲ್ಲಾ ಸವಲತ್ತುಗಳನ್ನು ಪಡೆಯಲು ಮೂಲ ಪಹಣಿ, ಅರ್ಜಿದಾರರ ಹೆಸರಿನಲ್ಲಿ ಆಲೂಗಡ್ಡೆ ಖರೀದಿಸಿದ ಬಿಲ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಗಳನ್ನು ಹಾಸನದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ತಾಲೂಕುವಾರು ತೆರೆದಿರುವ ಇಲಾಖೆಯ ಮಳಿಗೆಯಲ್ಲಿ ಸಲ್ಲಿಸುವಂತೆ ಅರಕಲಗೂಡು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಶ್ವೇತ ಕೋರಿದ್ದಾರೆ.



ಬಾಲಕಿಯರ ಕಾಲೇಜಿಗೆ ಶೇ. 90 ಫಲಿತಾಂಶ
ಹೊಳೆನರಸೀಪುರ: ಪಟ್ಟಣದ ಮಹಾತ್ಮಾಗಾಂಧಿ ಉದ್ಯಾನವನದ ಹಿಂಭಾಗದಲ್ಲಿನ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಫಲಿತಾಂಶವನ್ನು ಗಳಿಸುವ ಮೂಲಕ ಉತ್ತಮ ಸಾಧನಗೈದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ತಿಳಿಸಿದ್ದಾರೆ.
ಈ ಬಾರಿ ಕಾಲೇಜಿನ 50 ವಿದ್ಯಾರ್ಥಿನಿಯರು ಪಿಯುಸಿ ಪರೀಕ್ಷೆಯಲ್ಲಿ ಹಾಜರಾಗಿದ್ದು, ಇವರಲ್ಲಿ 4 ವಿದ್ಯಾರ್ಥಿನಿಯರು ಅತ್ಯುತ್ತಮ ದರ್ಜೆ, 25 ಪ್ರಥಮ ದರ್ಜೆ, 11 ದ್ವಿತೀಯ ದರ್ಜೆ ಹಾಗೂ 5 ವಿದ್ಯಾರ್ಥಿನಿಯರು ತೃತೀಯ ದರ್ಜೆ ಗಳಿಸುವ ಮೂಲಕ ಕಾಲೇಜು ಶೇ. 90 ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
2014-15ನೇ ಶೈಕ್ಷಣಿಕ ಸಾಲಿನ ದಾಖಲಾತಿಗಳು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವು ಪ್ರಕಟಗೊಂಡ ದಿನದಿಂದಲೇ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿದ್ದು, ವಿಜ್ಞಾನ ವಿಭಾಗಕ್ಕೆ ಸೇರುವ ಎಲ್ಲಾ ವಿದ್ಯಾರ್ಥಿನಿಯರಿಗೂ ಉಚಿತ ಸಿಇಟಿ ಕೋಚಿಂಗ್ ನೀಡಲಾಗುವುದೆಂದು ಕಾಲೇಜಿನ ಪ್ರಾಂಶುಪಾಲ ಸುರೇಶ್ ತಿಳಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement