ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕನ್ನಿಕಾಪರಮೇಶ್ವರಿ ವಿಶೇಷ ಪೂಜೆ

Rashmi Kasaragodu
Updated On : 12 May 2014, 1:14 am

ಅರಸೀಕೆರೆ: ವಾಸವಿ ಜಯಂತಿ ಪ್ರಯುಕ್ತ ಶನಿವಾರ ಪಟ್ಟಣದ ಕನ್ನಿಕಾಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ಅಮ್ಮನವರಿಗೆ ವಿಶೇಷ ಅಲಂಕಾರ ಮತ್ತು ಪೂಜಾ ಕೈಂಕರ್ಯಗಳನ್ನು ಆರ್ಯವೈಶ್ಯ ಸಮಾಜ ಬಾಂಧವರು ಏರ್ಪಡಿಸಿದ್ದರು.
ಪಟ್ಟಣದ ಪೇಟೆಬೀದಿಯಲ್ಲಿ ಇರುವ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯಕ್ಕೆ ಶುಕ್ರವಾರ ಬೆಳಗ್ಗೆ 6ರಲ್ಲಿ ವೇದಘೋಷ ಮಂತ್ರಗಳೊಂದಿಗೆ ಸುಹಾಸಿನಿಯರು ಹಾಗೂ ಕನ್ನಿಕೆಯರಿಂದ 102 ಕಳಸಗಳೊಂದಿಗೆ ರಾಘವೇಂದ್ರ ಮಠದಿಂದ ಮಂಗಳ ವಾದ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ಗಂಗಾದೇವಿಯನ್ನು ಕರೆ ತರಲಾಯಿತು. ತದನಂತರದಲ್ಲಿ ದೇವಾಲಯದಲ್ಲಿ ಋತ್ವಿಕರಿಂದ ಶ್ರೀಮಹಾಗಣಪತಿ ಹೋಮ, ಶ್ರೀಅಮ್ಮನವರ ಮೂಲಮಂತ್ರ ಹೋಮಗಳನ್ನು ನೆರವೇರಿಸಲಾಯಿತು.
ಮಧ್ಯಾಹ್ನ ತೊಟ್ಟಿಲು ಸೇವೆ ಮತ್ತು ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಕನ್ನಿಕಾ ಮತ್ತು ಬಾಲ ನಾಗರಪೂಜೆ, ಅಷ್ಠಾವಧಾನ ಧಾರ್ಮಿಕ ಕಾರ್ಯಗಳು ನೆರವೇರಿದ ನಂತರ ಮಹಾಮಂಗಳಾರತಿ ಹಾಗೂ ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿತರಣೆ ಮಾಡಲಾಯಿತು.
ಈ ಧಾರ್ಮಿಕ ಸಮಾರಂಭದಲ್ಲಿ ಆರ್ಯವೈಶ್ಯ ಮಂಡಲಿ ಗೌರವಾಧ್ಯಕ್ಷ ಕೆ.ಎನ್.ದುರ್ಗಪ್ಪಶೆಟ್ಟಿ, ಕಾರ್ಯಾಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ಕೆ.ಎ.ಪ್ರಸನ್ನಕುಮಾರ್, ಸಹ ಕಾರ್ಯದರ್ಶಿ ಎಚ್.ಜಿ. ವೆಂಕಟೇಶ ಬಾಬು, ದೇವಾಲಯ ಉಸ್ತುವಾರಿ ಸಮಿತಿ ಅಧ್ಯಕ್ಷ ಎಚ್.ಪಿ. ಅಶೋಕ್ ಕುಮಾರ್, ಸದಸ್ಯರಾದ ಸಿ.ವಿ.ಶ್ರೀಧರ್ ಮೂರ್ತಿ, ಸಿ.ಎನ್. ಜಯರಾಂ, ಎಂ.ಕೆ. ಭಗವಾನ್ ಶೆಟ್ಟಿ, ಪಿ.ಆರ್. ಗಿರೀಶ್ ಕುಮಾರ್, ಈ. ರಮೇಶ್ ಹಾಗೂ ಪುರಸಭಾ ಸದಸ್ಯ ಪಾರ್ಥಸಾರಥಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement