ಖಾಲಿ ಮಾಡದ್ದಕ್ಕೆ ಅಂಗಡಿಯೇ ಧ್ವಂಸ!
ಹಾಸನ: ಅಂಗಡಿ ಮಳಿಗೆ ಖಾಲಿ ಮಾಡಲಿಲ್ಲ ಎಂಬ ಒಂದೇ ಕಾರಣಕ್ಕೆ ಏಕಾಏಕಿ ಕಟ್ಟಡ ಧ್ವಂಸ ಮಾಡಿದ ಘಟನೆ ನಗರದಲ್ಲಿ ಇತ್ತೀಚೆಗೆ ನಡೆದಿದೆ. ನಗರದ ಅಜಾದ್ ರಸ್ತೆಯಲ್ಲಿ ಫಾತೀಮ ಎಂಬುವರಿಗೆ ಸೇರಿದ ಕಟ್ಟಡದಲ್ಲಿ ಕಳೆದ 20 ವರ್ಷಗಳಿಂದ ಆಯುಬ್ ಆಟೋ ವರ್ಕ್ಸ್ ಮತ್ತು ಕೋಳಿ ಅಂಗಡಿಯವರು ಬಾಡಿಗೆಗೆ ಇದ್ದರು. ಈ ಹಿಂದೆ ಈ ಮಳಿಗೆಯನ್ನು ಖಾಲಿ ಮಾಡುವಂತೆ ಫಾತಿಮಾ ಒತ್ತಾಯ ಮಾಡಲಾಗಿತ್ತು. ಅಂಗಡಿ ಖಾಲಿ ಮಾಡದೆ ಇದ್ದುದರಿಂದ ಏಕಾಏಕಿ ಪಾತೀಮ ಕಡೆಯವರಿಂದ ಮಹಿಳೆಯರು ಸೇರಿದಂತೆ ಪುರುಷರು ರಾತ್ರೋ ರಾತ್ರಿ ದಾಳಿ ಮಾಡಿ ಕಟ್ಟಡಕ್ಕೆ ಹಾನಿ ಮಾಡಿದ್ದಾರೆ ಎಂದು ದೂರಿದ್ದಾರೆ. ಈ ವೇಳೆ ಆಟೋ ವರ್ಕ್ಸ್ ಅಂಗಡಿ ಒಳಗಿದ್ದ ಆಯುಬ್ ಎಂಬುವರ ಮೇಲೆ ಹಲ್ಲೆ ನಡೆದು ಗಾಯಗಳಾಗಿ ಈಗ ಆಸ್ಪತ್ರೆ ಸೇರಿದ್ದಾರೆ. ಕೋಳಿ ಅಂಗಡಿ ಪೂರ್ಣ ಮುಂಭಾಗದ ಕಟ್ಟಡ ನೆಲಸಮ ಗೊಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಯಾವುದೇ ನೋಟಿಸ್ ಜಾರಿ ಮಾಡದೇ, ಏಕಾಏಕಿ ಕಟ್ಟಡ ದ್ವಂಸ ಮಾಡಲಾಗಿದೆ. ಮಳಿಗೆಯಲ್ಲಿರುವವರಿಗೆ ನ್ಯಾಯ ದೊರಕಿಸಿ ಕೊಡದಿದ್ದರೇ ಮುಂದಿನ ದಿನಗಳಲ್ಲಿ ದ್ವಿ ಚಕ್ರ ವಾಹನ ಅಸೋಸಿಯನ್ ವತಿಯಿಂದ ಉಗ್ರ ಪ್ರತಿಭಟನೆ ಮಾಡುವುದಾಗಿ ಜಿಲ್ಲಾಧ್ಯಕ್ಷ ಶಫೀ ಅಹಮದ್ ಆಗ್ರಹಿಸಿದ್ದಾರೆ.