ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗಾವಿನ ಹಬ್ಬದ ಹೆಸರಲ್ಲಿ ಎಗ್ಗಿಲ್ಲದೆ ಪ್ರಾಣಿ ಬಲಿ

Rashmi Kasaragodu
Updated On : 12 May 2014, 2:26 am

ಹನೂರು: ಅಜ್ಜೀಪುರದ ಪಚ್ಚಮಲೆಯಮ್ಮ ಹಾಗೂ ಮುನಿಸ್ವಾಮಿ ದೇವಸ್ಥಾನದಲ್ಲಿ ಪ್ರಾಣಿದಯಾ ಸಂಘದವರ ವಿರೋಧದ ನಡುವೆಯೂ ಪ್ರತಿವರ್ಷದಂತೆ ಈ ವರ್ಷವೂ ಗಾವಿನ ಹಬ್ಬದ ಹೆಸರಿನಲ್ಲಿ ಪ್ರಾಣಿ ಬಲಿ ಎಗ್ಗಿಲ್ಲದೆ ನಡೆಯಿತು.
ಶನಿವಾರ ಮುಂಜಾನೆ 6ರ ಸುಮಾರಿಗೆ ಬಲಿಗೆ ಸಿದ್ದವಾಗಿದ್ದ 40-50 ಮೇಕೆಗಳನು ಒಂದೊಂದಾಗಿ ಕತ್ತಿಯಿಂದ ಒಂದೇ ಏಟಿಗೆ ಕತ್ತರಿಸಿ ಪ್ರಾಣಿ ಬಲಿ ನೀಡಿ ಉಗ್ರ ದೇವತೆ ದೇವಸ್ಥಾನದಲ್ಲಿ ಮೇಕೆಗಳ ಮಾರಣ ಹೋಮ ಮೂಲಕ ಹಬ್ಬ ಆಚರಿಸಲಾಯಿತು. ಅರ್ಚಕರು ಕತ್ತರಿಸಿದ ಮೇಕೆಯನು ಎತ್ತಿ ಹಿಡಿದು ರಕ್ತ ಕುಡಿದು ಎಸೆಯುತ್ತಿದ್ದಂತೆ ಅದನು ನೀಡಿದ್ದ ಹರಕೆ ಹೊತ್ತ ಭಕ್ತರು ಚೀಲಕ್ಕೆ ತುಂಬಿಕೊಂಡು ಹೋಗಿ ಕತ್ತರಿಸಿ ಅಡುಗೆಗೆ ತಯಾರಿ ನಡೆಸುತ್ತಿದ್ದರು. ಸುತ್ತ ನೆರೆದಿದ್ದ ಜನ ಕೇಕೆ ಹಾಕಿ ಜೈಕಾರ ಕೂಗುತ್ತಿದ್ದರು. ಪ್ರಾಣಿ ಬಲಿ ತಡೆಯಲು ಪಣ ತೊಟ್ಟು ಬಂದಿದ್ದ ಪ್ರಾಣಿ ದಯಾಸಂಘದ ದಯಾನಂದ ಸ್ವಾಮಿಗಳ ಬಲಿ ತಡೆ ಯತ ವಿಫಲವಾಯಿತು. ಭಕ್ತರ ನೂಕು ನುಗ್ಗಲು ತಳ್ಳಾಟದಿಂದಾಗಿ ಬದಿಗೆ ಸರಿಯಬೇಕಾಯಿತು. ಬಲಿ ಕಾರ್ಯ ಎಗ್ಗಿಲ್ಲದೆ ಸಾಗಿತು. ಸ್ಥಳದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರ ಪ್ರಯತವೂ ವಿಫಲವಾಯಿತು.  ಬಲಿಯ ನಂತರ ಕುರುಹು ಸಿಗದಿರಲೆಂದು ತಕ್ಷಣವೇ ರಕ್ತದೋಕುಳಿಯಾಗಿದ್ದ ದೇವಸ್ಥಾನದ ಮುಂಭಾಗವನು ಟ್ರಾಕ್ಟರ್‌ನಿಂದ ಉತ್ತು ರಕ್ತ ಕಾಣದಂತೆ ಮಾಡಲಾಯಿತು. ನಂತರ ಏನು ನಡೆದೇ ಇಲ್ಲವೆಂಬಂತೆ ಮಾಮೂಲಿನ ಪೂಜಾ ಕಾರ್ಯಗಳು ನಡೆಯಿತು. ಅಜ್ಜೀಪುರ, ಬಸಪ್ಪನದೊಡ್ಡಿ, ಕುರುಬರ ದೊಡ್ಡಿ ಕಾಂಚಳ್ಳಿ, ಗುಂಡಾಪುರ,  ಸೇರಿದಂತೆ ಸುತ್ತಮುತ್ತಲ  ಹಳ್ಳಿಗಳ ಭಕ್ತರು ಭಾಗವಹಿಸಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement