ರಂಗನಾಥಸ್ವಾಮಿಗೆ ಅಪರೂಪದ ಕವಚ
ಬೇಲೂರು: ಬೇಲೂರು ಶಿಲ್ಪ ಕಲೆಗಳ ನೆಲೆಬೀಡು, ಇಲ್ಲಿನ ವಾಸ್ತು ಶಿಲ್ಪಗಳ ಕಲೆಯ ವೈಭವ ಮತ್ತು ಪುರಾಣ ಪುಣ್ಯ ಕಥೆಗಳನ್ನು ತಿಳಿಯಲು ದೇಶ-ವಿದೇಶದಿಂದ ಸಾವಿರಾರು ಜನ ದಿನ ನಿತ್ಯ ಬಂದು ಹೋಗುತ್ತಾರೆ.
ಇಂತಹ ಶಿಲ್ಪಗಳ ನಾಡಿನಲ್ಲಿ ಕಲ್ಲು, ಬೆಳ್ಳಿ, ಚಿನ್ನ, ತಾಮ್ರ, ಕಿತ್ತಾಳೆ ಪಂಚಲೋಹ ಇನ್ನಿತರ ಲೋಹಗಳಿಂದ ಸುಂದರ ಮೂರ್ತಿ ವಿಗ್ರಹ ಹಾಗೂ ಮುಖವಾಡ, ಕವಚ ಹೀಗೆ ಹಲವು ಹತ್ತು ಬಗೆಯಲ್ಲಿ ಕೆತ್ತನೆ ಮಾಡುವ ನಾಡಿನ ಏಕೈಕ ಖ್ಯಾತ ಶಿಲ್ಪಿ ಹುಲಿರಾಜ್ ಆಚಾರ್.
ಮೂಲತಃ ವ್ಯವಸಾಯ ಕುಟುಂಬದಿಂದ ಬಂದ ಇವರು ಶಿಲ್ಪಗಳ ಕೆತ್ತನೆಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ದೈವ ಪ್ರೇರಣೆ ಎನ್ನವ ಇರುವ ಮಕ್ಕಳನ್ನು ಉನ್ನತ ವಾಸಂಗ ಮಾಡಿಸುತ್ತಾ ಶಿಲ್ಪ ಕಲೆಯ ಬಗ್ಗೆ ತಿಳಿವಳಿಕೆ ಮೂಡಿಸುತ್ತಿದ್ದಾರೆ, ಸದ್ಯ ಬೇಲೂರು ಪಟ್ಟಣದಲ್ಲಿ ಚಾಮುಂಡೇಶ್ವರಿ ಶಿಲ್ಪ ಕಲೆಯ ಅಂಗಡಿ ಇಟ್ಟುಕೊಂಡು ಕಾಯಕ ಮಾಡುತ್ತಿದ್ದಾರೆ.
ಇತ್ತಿಚೀನ ದಿನದಲ್ಲಿ ಅವರು ಆಲೂರು ತಾಲೂಕಿನ ಕದಾಳು ಗೋಬೆ ರಂಗನಾಥಸ್ವಾಮಿ ದೇವಾಲಯದ ರಂಗನಾಥಸ್ವಾಮಿಗೆ ಮೈ ಕವಚ ನಿರ್ಮಾಣ ಮಾಡಿದ್ದು, ನೋಡುಗರಲ್ಲಿ ಭಕ್ತಿ- ಭಾವ ಚಿಮ್ಮುವಂತೆ ಮಾಡಿದ್ದಾರೆ.
ಈ ವಿಗ್ರಹದ ಕವಚವನ್ನು ಹಾಸನ ಜಿಲ್ಲೆಯ ಕಟ್ಟಾಯ ಹೋಬಳಿ ನಾಯಕರಹಳ್ಳಿ ನಿವಾಸಿ ನಿವೃತ್ತ ತೋಟಗಾರಿಕೆ ಇಲಾಖೆ ಅಧಿಕಾರಿ ಸ್ವಾಮ ಗೌಡ ಮತ್ತು ಮಕ್ಕಳು ಶ್ರೀ ರಂಗನಾಥ ಸ್ವಾಮಿಗೆ ಸುಮಾರು ರು. 2 ಲಕ್ಷ ಮೌಲ್ಯದ ಬೆಳ್ಳಿ ವಿಗ್ರಹ ಕವಚವನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಬೇಲೂರು ಕನ್ನಡ ಸೇನೆ ಅಧ್ಯಕ್ಷ ಪ್ರಭಾಕರ್ ಇದ್ದರು.