ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಜ್ಯದಲ್ಲಿ ಕಾಂಗ್ರೆಸ್‌ಗೆ 20 ಸ್ಥಾನ: ಮುನಿಯಪ್ಪ ಆಶಯ

Rashmi Kasaragodu
Updated On : 12 May 2014, 1:12 am

ಹಾಸನ: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್‌ಗೆ 20ಕ್ಕೂ ಹೆಚ್ಚು ಸೀಟು ಬರಲಿದೆ ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮ ಖಾತೆ ಸಚಿವ ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ಜನಪ್ರಿಯ ಕಾರ್ಯಕ್ರಮಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಹಿಂದುಳಿದ, ಅಲ್ಪ ಸಂಖ್ಯಾತ, ಬುಡಕಟ್ಟು ಜನಾಂಗ ಸೇರಿದಂತೆ ಇತರರಿಗೆ ಸಾಲಮನ್ನಾ ಮಾಡಲಾಗಿದೆ.
ಆಶಾಭಾವನೆ: ರೈತರಿಗೆ 3 ಲಕ್ಷದವರೆಗೂ ಬಡ್ಡಿ ರಹಿತ ಸಾಲ ನೀಡುವಿಕೆ. 10 ಲಕ್ಷದವರೆಗೂ ಶೇ. 3ರ ದರದಲ್ಲಿ ಸಾಲ ನೀಡುವಿಕೆ. ಸಾಮಾನ್ಯ ರೈತನಿಗೆ ಹಾಗೂ ಎಲ್ಲಾ ವರ್ಗದವರಿಗೂ ಉಪಯುಕ್ತ ಬಜೆಟ್ ಕೊಟ್ಟ ಕೀರ್ತಿ ಹೊಂದಿದ್ದಾರೆ. ಒಳ್ಳೆಯ ಕಾರ್ಯಕ್ರಮ ನೀಡಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯುವ ಆಶಾ ಭಾವನೆಯಿಂದ ಇರುವುದಾಗಿ ಹೇಳಿದರು.
ಯುಪಿಎ ಉತ್ತಮ ಆಡಳಿತ: ಕೇಂದ್ರ ಸರ್ಕಾರ ನೀಡಿರುವ ಮಹತ್ವದ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯಪಿಎ ಸರ್ಕಾರಕ್ಕೆ ಸಲ್ಲುತ್ತದೆ. ಸಾಲವನ್ನು ಅತಿಸಣ್ಣ ರೈತರಿಗೆ ನೀಡುವ ಮಹತ್ವ ಕಾರ್ಯಕ್ರಮ ಕೊಟ್ಟಿದೆ. ಮೈಕ್ರೋ ಮೀಡಿಯಾದ 2012-13ನೇ ಸಾಲಿನಲ್ಲಿ 1 ಲಕ್ಷದವರೆಗೂ ಕೈಗಾರಿಕೆ ಮಾಡುವವರಿಗೆ ನೀಡಲಾಗಿದೆ. ಜಿಲ್ಲಾಧಿಕಾರಿ ಮೂಲಕ ದೇಶಾದ್ಯಂತ ಒಂದು ಜಿಲ್ಲೆಯಲ್ಲಿ 100 ಜನರನ್ನು ಆಯ್ಕೆ ಮಾಡಿ ಸಬ್ಸಿಡಿ ಸಾಲ ನೀಡುವ ಕಾರ್ಯ ಮಾಡಲಾಗಿದೆ. ಅಯ್ಕೆ ಮಾಡಿದ ಎಲ್ಲಾ ವರ್ಗದ ಜನ ಇದರೊಳಗೆ ಸೇರಿದ್ದಾರೆ ಎಂದರು.  ಈ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement