ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಪ್ತಸ್ವರ ಮಂದಿರಕ್ಕೆ ಪ್ರವಾಸಿಗರ ದಂಡು

Rashmi Kasaragodu
Updated On : 12 May 2014, 1:14 am

ಕ.ಪ್ರ.ವಾರ್ತೆ, ರಾಮನಾಥಪುರ, ಮೇ 11
ಒಂದು ಕಡೆ ಕೊಡಗಿನಿಂದ ಹರಿಯು ಕಾವೇರಿ ನದಿಯ ಝೋಕಾರ, ಮತ್ತೊಂದೆಡೆ ಸಂಗೀತದ ನಿನಾದವಾದ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಪ್ರವಾಸಿಗರ ಸಂಭ್ರಮ. ವೈಶಾಖ ಜ್ಯೇಷ್ಠ ಮಾಸದ ಶಾಲಾ- ಕಾಲೇಜು ರಜಾದ ವೇಳೆಯಲ್ಲಿ ರುದ್ರಪಟ್ಟಣದಲ್ಲಿ ತಂಬೂರಿ ಆಕಾರದಲ್ಲಿ ನಿರ್ಮಿಸಿರುವ ಸಪ್ತಸ್ವರ ದೇವತಾ ಮಂದಿರ ನೋಡಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ.                                                                   
ರಾಮನಾಥಪುರದಿಂದ 5 ಕಿ.ಮೀ. ದೂರದಲ್ಲಿರುವ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಶ್ರೀ ಸರಸ್ವತಿ ಮಾತೆಯ ರೂಪದಲ್ಲಿ ನಿರ್ಮಿಸಲಾಗಿರುವ 70 ಅಡಿ ಎತ್ತರದ ಗೋಪುರದಲ್ಲಿ ತಂಬೂರಿಯ ಕೊಡ, ಕಾಯಿ, ಎತ್ತರ 30 ಅಡಿ. ಅಗಲ 30-40 ವಿಸ್ತೀರ್ಣ ಹೊಂದಿದೆ.
ಮೂಡಿ ಬಂದ ಹೊಸ ಕಲ್ಪನೆ: ಸಂಗೀತಕ್ಕೆ ಸಪ್ತಸ್ವರಗಳೇ ಮೂಲ.
ಸಪ್ತಸ್ವರ ದೇವತೆಗಳ ಮತ್ತೊಂದು ಹೆಸರು ಶಡ್ಜ-ಶಡ್ಜವೇ ಸಂಗೀತಕ್ಕೆ ಮೂಲವಾದ್ದರಿಂದ ಅದಕ್ಕೆ ಇಲ್ಲಿ ಹೆಚ್ಚಿನ ಪ್ರಾತಿನಿತ್ಯ ನೀಡಲಾಗಿದೆ. ಸಂಗೀತ ವಿದ್ವಾನ್ ಅರ್.ಕೆ. ಪದ್ಮನಾಭ ಅವರು ಈ ಸಪ್ತಸ್ವರಗಳು ಈ ದೇವತೆಗಳನ್ನು ಪ್ರತಿನಿಧಿಸುತ್ತಾರೆ ಎಂದು ಹೇಳುತ್ತಾರೆ.
ಸಪ್ತಸ್ವರಗಳು: ಸ-ಸರಸ್ವತಿ, ರಿ-ಪುರಂದರದಾಸರು, ಗ-ಗಾಂಧಾರ, ವಾದಿರಾಜರು, ಮ-ಮಧ್ಯಮ, ಕನಕದಾಸರು, ಪ-ಪಂಚಮ, ತ್ಯಾಗರಾಜರು, ದ- ದೈವ, ತಾ-ಮುತ್ತುಸ್ವಾಮಿ ದೀಕ್ಷೀತರು, ನಿ-ನಿಷಾಧ, ಶಾಮಾಶಾಸ್ತ್ರಿಗಳು. ಅವರ ಪ್ರತಿಮೆಗಳನ್ನು ಇಲ್ಲಿ ಅಳವಡಿಸಲಾಗಿದೆ.
ಇಲ್ಲಿಯ ಸರಸ್ವತಿಯನ್ನು ಹೊರತುಪಡಿಸಿ ಮತ್ತೆಲ್ಲರೂ ಸಾಕಾರಮೂರ್ತಿಗಳು.
ಇವರೆಲ್ಲರೂ ಸಂಗೀತ ದೇವತೆಗಳೇ. ವಿಶೇಷವಾಗಿ ಕನಕದಾಸರು ಸಾಮಾನ್ಯರಿಗೆ ನೀಡಿದ ಸಂಗೀತ ಕೊಡುಗೆ ವಿಶೇಷವಾದುದು.
ಈ ಎಲ್ಲಾ ದೇವತೆಗಳಿಗೂ ಪ್ರತಿ ವರ್ಷ ಧಾರ್ಮಿಕ ಅಭಿಷೇಕ, ನಾದಾಭಿಷೇಕದ ಸಾಂಸ್ಕೃತಿಕ ಪೂಜೆ ನಡೆಯುತ್ತಿದೆ.
ಹೆಗ್ಗಳಿಕೆ: ವಿದ್ವಾನ್ ಅರ್.ಕೆ. ಪದ್ಮನಾಭ ಅವರ ಕಲಾ ಸೇವೆಯಿಂದ ನಿರ್ಮಿತಗೊಂಡಿದೆ. ಕಾವೇರಿ ನದಿ ದಂಡೆಯ ದಕ್ಷಿಣ ಕಾಶಿ ರಾಮನಾಥಪುರ ಧಾರ್ಮಿಕ ಗ್ರಾಮವಾದರೆ ರುದ್ರಪಟ್ಟಣ ಸಂಗೀತ ಗ್ರಾಮವೆಂದು ಹೆಗ್ಗಳಿಕೆ ಪಡೆದಿವೆ.



23ರಿಂದ ಸಂಗೀತೋತ್ಸವ
ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ 13ನೇ ವಾರ್ಷಿಕ ಸಂಗೀತೋತ್ಸವ ಮೇ 23ರಿಂದ 25ರವರೆಗೆ ನಡೆಯಲಿದೆ ಎಂದು ವಿದ್ವಾನ್ ಆರ್.ಕೆ. ಪದ್ಮನಾಭ ತಿಳಿಸಿದ್ದಾರೆ.
ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಪ್ರತಿಸ್ಥಾನವತಿಯಿಂದ ಕಾವೇರಿ ನದಿ ತಟದಲ್ಲಿ 3 ದಿವಸಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಕಾವೇರಿ ಪೂಜೆ, ತೆಪೋತ್ಸವ, ನೂರಾರು ಸಂಗೀತ ವಿದ್ವಾಸರಿಂದ ಪಂಚಕೃತಿಗಳ ಗೋಷ್ಠಿ ಗಾಯನ, ಉತ್ಸವಗಳು, ಧಾರ್ಮಿಕ ಸಭೆಗಳು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯುತ್ತವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement