ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಅವಕಾಶ ಸದುಪಯೋಗ ಮಾಡಿಕೊಂಡವರೇ ಜಾಣರು'

Rashmi Kasaragodu
Updated On : 13 May 2014, 2:01 am

ಬೇಲೂರು: ಬದುಕಿನ ಉದ್ದದ ಪಯಾಣದಲ್ಲಿ  ಮನುಷ್ಯುನಿಗೆ ಒಮ್ಮೆ ಬದಲಾವಣೆಯ ಅವಕಾಶ ಬರುತ್ತವೆ. ಈ ಸದಾವಕಾಶವನ್ನು ಉಪಯೋಗ ಮಾಡಿಕೊಂಡವರು ಜೀವನದಲ್ಲಿ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂದು ಲಯನ್ಸ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಅಶೋಕ್ ಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿವರ್ತನೆ ಸಹಜ ಕ್ರಿಯೆ. ಆದರೆ, ಪರಿವರ್ತನೆ ಜೊತೆಯಲ್ಲಿ ಸಾಧನೆ ಮುಖ್ಯವಾಗಬೇಕು. ಕಾರಣ, ಮನುಷ್ಯನ ಕ್ಷಣ ಮಾತ್ರ ಬದುಕಿನಲ್ಲಿ ಅಂತ್ಯದಲ್ಲಿ ಉಳಿಯುವ ಪ್ರೀತಿ ವಿಶ್ವಾಸ ಸೇವೆ ಮಾನವ ಜೀವನದ ಮಹತ್ವದ ಘಟನೆಗಳಾಗುತ್ತವೆ. ಈ ದಿಸೆಯಲ್ಲಿ ಹುಟ್ಟಿದ ಮನುಷ್ಯ ತನ್ನ ಬದುಕಿನಲ್ಲಿ ಸೇವೆ ಮೈಗೂಡಿಸಿಕೊಂಡು ಇತರರಿಗೆ ದಾರಿ ದೀಪವಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಲಯನಸ್ ಸಂಸ್ಥೆ ಕಾರ್ಯದರ್ಶಿ ರಮೇಶ್ ಕುಮಾರ್, ಖಜಾಂಚಿ ಸುರೇಶ್, ಜಿಲ್ಲಾ ಸಂಚಾಲಕ ರಮೇಶ್, ಮಂಜುನಾಥ ಮೂರ್ತಿ, ಡಾ. ಸಂತೋಷ್, ಡಾ. ಚಂದ್ರಮೌಳಿ, ವಕೀಲ ರಾಜಶೇಖರ್, ತಾಲೂಕು ಕಸಾಪ ಅಧ್ಯಕ್ಷ ಬಿ.ಎನ್. ಆನಂದ್, ತೌಫಿಕ್ ಅಹಮದ್, ತಾಪಂ ಸದಸ್ಯ  ಸುಭಾನ್, ಸೆಬ್ಸಟನ್, ವಂಸತಕುಮಾರ್, ರವಿಕುಮಾರ್, ಧಮೇಂದ್ರ ಯಾದವ್, ಮಣಿ, ಪುಟ್ಟಸ್ವಾಮಿ, ವಿರೂಪಾಕ್ಷ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement