ಆಲೂ ವರ್ತಕರ ವಿರುದ್ಧ ಆಕ್ರೋಶ
ಹಾಸನ: ಬಿತ್ತನೆ ಆಲೂಗಡ್ಡೆಯನ್ನು ಹೆಚ್ಚಿನ ದರಕ್ಕೆ ಹಾಗೂ ಕೊಳೆತ ಆಲೂಗಡ್ಡೆಯನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ಆಲೂಗಡ್ಡೆಯನ್ನು ರಸ್ತೆಯಲ್ಲಿ ಸುರಿದು ಸೋಮವಾರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ರೈತರು ಆಲೂಗಡ್ಡೆ ವರ್ತಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾರುಕಟ್ಟೆಯಲ್ಲಿ ಕಳೆದ ಮೂರು ದಿವಸಗಳಿಂದ ಆಲೂ ಮಾರಾಟ ನಡೆಯುತ್ತಿದ್ದು, ಅದೆ ರೀತಿ ರೈತರು ಕೂಡ ಕೊಳ್ಳಲು ಮುಂದಾದರು. ಭಾರಿ ಬೇಡಿಕೆ ಇದ್ದ ಆಲೂಗೆ ದರವನ್ನು ವರ್ತಕರು ನಿಗದಿತ ಬೆಲೆಗಿಂತ ಹೆಚ್ಚು ಮಾಡಿದ್ದರಿಂದ ರೈತರು ಲಾರಿ ಲೋಡಿನ ಚೀಲವನ್ನು ರಸ್ತೆ ಮೇಲೆ ಸುರಿದು ಪ್ರತಿಭಟಿಸಿದರು.