ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೊಬ್ಬರಿ ಬೆಲೆ ಏರಿಕೆ

Rashmi Kasaragodu
Updated On : 13 May 2014, 1:59 am

ಜಾವಗಲ್: ಜಾವಗಲ್ ಸಂತೆಯಲ್ಲಿ ಕೊಬ್ಬರಿ ಧಾರಣೆಯಲ್ಲಿ ಕಳೆದ 2 ವಾರದ ಬೆಲೆಗಿಂತ ಈ  ಭಾನುವಾರದ ಬೆಲೆಯಲ್ಲಿ ಏರಿಕೆ ಕಂಡಿದ್ದು, 1 ಕ್ವಿಂಟಾಲ್ಗೆ ರು. 11, 300 ಧಾರಣೆ ಇತ್ತು.
ತೆಂಗಿನ ಕಾಯಿ ಬೆಲೆಯು ಏರಿಕೆ ಕಂಡು ಬಂದು ಕಿ.ಲೋ. 1ಕ್ಕೆ 26-28 ರುಗಳಾಗಿತ್ತು. 1000 ತೆಂಗಿನಕಾಯಿ ಬೆಲೆ ರು. 15000-16000ಗಳಾಗಿತ್ತು. ಉಳಿದಂತೆ ತರಕಾರಿಗಳ ಬೆಲೆಯಲ್ಲಿಯೂ ಕಳೆದ 2 ವಾರದ ಬೆಲೆಗಿಂತ ಅಲ್ಪ ಸ್ವಲ್ಪ ಏರಿಕೆ ಕಂಡು ಬಂದಿತ್ತು.
ಗಡ್ಡೆಕೋಸು, ಬೀನ್ಸ್ ಮತ್ತು ಹಸಿಮೆಣಸಿನಕಾಯಿ 1 ಕೆಜಿಗೆ ರು. 40, ಕ್ಯಾರೆಟ್ 1 ಕೆಜಿಗೆ ರು. 35-40, ಆಲೂಗಡ್ಡೆ, ಬದನೆ, ಸೀಮೆಬದನೆ, ಹಿರೇಕಾಯಿ ಕೆಜಿಗೆ 1ಕ್ಕೆ ರು. 30, ಈರುಳ್ಳಿ ಕೆಜಿ 1ಕ್ಕೆ ರು. 10, ಟೊಮೆಟೋ ಕಿಲೋ 1ಕ್ಕೆ ರು. 15ಗಳಾಗಿತ್ತು. ಕೊಬ್ಬರಿ ಧಾರಣೆಯಲ್ಲಿ ಏರಿಕೆಯಾಗಿರುವುದರಿಂದ ಕಳೆದ 2-3 ತಿಂಗಳ ಹಿಂದೆ 1 ಕೆಜಿ ಕೊಬ್ಬರಿ ಎಣ್ಣೆಗೆ ರು. 100ಗಳಿದ್ದು, ಈ ವಾರ ರು. 150ಗಳಿಗೆ ಏರಿಕೆಯಾಗಿದೆ. ಹರಳೆಣ್ಣೆ 1 ಕೆಜಿಗೆ ರು. 100ಗಳಾಗಿತ್ತು.


ಶ್ರದ್ಧೆ ಭಕ್ತಿಯ ವಾಸವಿ ಜಯಂತಿ
ಸಕಲೇಶಪುರ: ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ವಾಸವಿ ಜಯಂತಿಯಲ್ಲಿ ಭಕ್ತರು ಶ್ರದ್ಧೆ ಭಕ್ತಿಯಿಂದ ಪಾಲ್ಗೊಂಡರು. ಜಯಂತಿಯ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ವಾಸವಿ ಜಯಂತಿ ಅಂಗವಾಗಿ ಬೆಳಿಗ್ಗೆಯಿಂದ ವಿಶೇಷ ಪೂಜೆ, ಹೋಮ ಹವನಾದಿಗಳು ಆರಂಭ ಗೊಂಡವು. ದೇವಸ್ಥಾನ ಹಾಗೂ ಕನ್ನಿಕಾ ಪರಮೇಶ್ವರಿ ದೇವಿಗೆ ವಿವಿಧ ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ 6.30ರಿಂದ ಗಂಗೆ ಪೂಜೆ,  ಗೋಪೂಜೆ, ಅಮ್ಮನವರಿಗೆ 108 ಲೀಟರ್ ಹಾಲಿನ ಅಭಿಷೇಕ, ದೇವಿಯ ಬೆಳ್ಳಿ ವಿಗ್ರಹಕ್ಕೆ ಭಕ್ತರಿಂದ ಕ್ಷೀರಾಭಿಷೇಕ, ವಾಸವಿ ಹೋಮ ನಡೆಯಿತು. ಮಹಿಳೆಯರಿಗಾಗಿ ನಡೆದ ಗಣೇಶ ಮೂರ್ತಿ ಜೋಡಣೆ ಸ್ಪರ್ಧೆ ಆಕರ್ಷಣೀಯವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement