ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಗರದ ವಿದ್ಯಾರ್ಥಿಗಳ ಕಲಿಕೆ ಉದ್ಯೋಗಕ್ಕಾಗಿ

Rashmi Kasaragodu
Updated On : 13 May 2014, 2:01 am

ಹಾಸನ: ನಗರ ಪ್ರದೇಶದ ವಿದ್ಯಾರ್ಥಿಗಳು ಉದ್ಯೋಗದ ದೃಷ್ಟಿಯಿಂದ ಕಲಿಕೆ ಪಡೆದರೆ ಗ್ರಾಮೀಣ ಪ್ರದೇಶದ ಮಕ್ಕಳು ಭೌತಿಕವಾಗಿ, ಮಾನಸಿಕವಾಗಿ ಬೆಳವಣಿಗೆಯನ್ನು ಪಡೆಯುತ್ತಾರೆ ಎಂದು ತಾಲೂಕಿನ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಐ.ಎಂ. ಮೋಹನ್ ತಿಳಿಸಿದರು.
ಗೊರೂರಿನ ಎ.ಎನ್. ವರದರಾಜುಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತದಲ್ಲಿ ವಿದ್ಯಾರ್ಥಿಗಳನ್ನು ಗ್ರಾಮೀಣ, ನಗರ ವಿದ್ಯಾರ್ಥಿಗಳು ಎಂದು ವಿಂಗಡಿಸುವ ಅವಶ್ಯಕತೆ ಇಲ್ಲ. ಗ್ರಾಮೀಣ ವಿದ್ಯಾರ್ಥಿಗಳು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಪಾಲ್ಗೊಳ್ಳುವ ಸಾಮಥ್ರ್ಯ ಪಡೆದಿದ್ದು, ಅವರಿಗಾಗಿ ಇರುವ ಅವಕಾಶ ಬಳಸಿಕೊಂಡು ಜೀವನದಲ್ಲಿ ಯಶಸ್ಸು ಪಡೆಯಬೇಕೆಂದು ಹೇಳಿದರು.
ನೂತನ ಯೋಜನೆ ಸೃಷ್ಟಿಕೊಳ್ಳಬೇಕು: ತಾಲ್ಲೂಕಿನ ತಹಸೀಲ್ದಾರ್ ವಿ. ಮಂಜುನಾಥ್ ಮಾತನಾಡಿ, ವ್ಯಕ್ತಿ ಇಡೀ ವ್ಯಕ್ತಿತ್ವ ವಿಕಸನವನ್ನು ಹೊಂದಿ ಬೆಳವಣಿಗೆ ಪಡೆಯಬೇಕಾಗುತ್ತದೆ. ಅಂತಹ ವ್ಯಕ್ತಿತ್ವ ವಿಕಸನ ಕೇವಲ ಒಂದೇ ಒಂದು ವಿಷಯದಿಂದ ಪಡೆಯಲು ಸಾಧ್ಯವಿಲ್ಲ. ಎಲ್ಲಾ ರೀತಿಯ ವಿಚಾರಗಳ ಅರಿವನ್ನು ವ್ಯಕ್ತಿ ಪಡೆಯಬೇಕಾಗುತ್ತದೆ. ಏನೇ ಮಾಡಿದರೂ ಯೋಜನೆಗಳು ಬೇಕು. ಅಂತಹ ಬೆಳವಣಿಗೆಗೆ ಸಹಕಾರಿಯಾಗುವ ನೂತನ ಯೋಜನೆಗಳನ್ನು ವಿದ್ಯಾರ್ಥಿಗಳು ಸೃಷ್ಟಿಸಿಕೊಳ್ಳಬೇಕು ಎಂದರು.
ಶೈಕ್ಷಣಿಕ ಕ್ಷೇತ್ರದಲ್ಲಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ, ಎನ್. ಎಸ್.ಎಸ್, ಸ್ಕೌಟಟ್ಸ್ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ವಿಷಯವಾರು ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು. ಯೋಗಾನರಸಿಂಹಸ್ವಾವು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎ.ಜಿ. ರಾಮನಾಥ್, ಎ.ಎನ್.ವಿ. ಕಾಲೇಜು ವಿಶ್ವಸ್ಥ ಮಂಡಳಿ, ಸಹಾಯಕ ನಿರ್ದೇಶಕ ಜಿ.ಎಸ್. ಜಯಸಿಂಹ, ಕನ್ನಡ ಉಪನ್ಯಾಸಕ ಎಚ್.ಸಿ. ಪುಟ್ಟರಾಜಪ್ಪ, ಕಾಲೇಜಿನ ಅಧೀಕ್ಷಕ ಶೇಷಾದ್ರಿ ಹಾಜರಿದ್ದರು. ಎಚ್. ಕೀರ್ತಿರಾಜ್ ಸ್ವಾಗತಿಸಿದರು. ಕೆ.ಎನ್.ಯಶವಂತಕುಮಾರ್ ವಂದಿಸಿದರು. ಕನ್ನಡ ಉಪನ್ಯಾಸಕ ಡಾ.ಎಚ್.ಸಿ. ಪುಟ್ಟರಾಜಪ್ಪ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement