ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿಜೃಂಭಣೆಯ ಕೆಂಚಾಂಬಾ ಜಾತ್ರೆ

Rashmi Kasaragodu
Updated On : 13 May 2014, 2:00 am

ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರಿಹಳ್ಳಿ ಗ್ರಾಮದ ಐತಿಹಾಸಿಕ ಕೆಂಚಾಂಬ ದೇವಿಯ ದೊಡ್ಡ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಡಗರ ಸಂಭ್ರಮದ ನಡುವೆ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಈ ಜಾತ್ರೆಗೆ ಸುತ್ತಮುತ್ತಲ ತಾಲೂಕುಗಳಿಂದ  ಹಾಗು 48 ಹಳ್ಳಿಗಳ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಜಾತ್ರೆಯ ಅಂಗವಾಗಿ ಗ್ರಾಮದ ಬೀದಿಗಳನ್ನು ತಳಿರು- ತೋರಣಗಳಿಂದ ಶೃಂಗರಿಸಿದ್ದರು. ಜಾತ್ರೆಯ ಒಂದು ವಾರದ ಮುಂಚೆಯೇ ಸುತ್ತಮುತ್ತಲ ಗ್ರಾಮಗಳಲ್ಲಿ ಸುಗ್ಗಿ ಸಾರಿಗೆ ಕರೆ ನೀಡಲಾಗಿದ್ದು, ರೊಟ್ಟಿ ಸುಡುವುದು, ಸಾರಿಗೆ ಒಗ್ಗರಣೆ ಹಾಕುವುದು ಹಾಗೂ ಮಾಂಸಾಹಾರ ನಿಷಿದ್ಧವಾಗಿತ್ತು. ಮನೆಗೆ ಬಂದ ನೆಂಟರು ಉಳಿಯುವ ಹಾಗಿರಲಿಲ್ಲ. ಈ ಆಚರಣೆಯನ್ನು ಕಟ್ಟುನಿಟ್ಟಾಗಿ ಆಚರಿಸಲಾಗಿತ್ತು.
ವಿಶೇಷ ದರ್ಶನ: ಎಲ್ಲಾ ಭಕ್ತಾದಿಗಳು ಗರ್ಭಗುಡಿ ಪ್ರವೇಶಿಸಿ ದೇವಿಯ ಪಾದ ಮುಟ್ಟಿ ನಮಸ್ಕರಿಸಲು ಅನುವು ಮಾಡಿದ್ದು ವಿಶೇಷವಾಗಿತ್ತು. ತಹಸೀಲ್ದಾರ್ ಮಹದೇವಯ್ಯ ಸೇರಿ ಸಹಸ್ರಾರು ಭಕ್ತರು ದೇವಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಕೆಂಚಾಂಬಾ ದೇವಸ್ಥಾನ ಸಮಿತಿ, ಮಂಗಳ ಕಲಾ ವೇದಿಕೆ ಸದಸ್ಯರು, ಜಯ ಕರ್ನಾಟಕ ಸದಸ್ಯರು, ಕಸಾಪ ಅಧ್ಯಕ್ಷ ಗುಲಾಂ ಸತ್ತಾರ್, ಸೋಮೇಶ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement