'ಅಧಿಕೃತ ಬಿಲ್ ನೀಡಿ'
ಹಾಸನ: ರೈತರಿಗೆ ವಿತರಿಸುತ್ತಿರುವ ಬಿತ್ತನೆ ಆಲೂಗಡ್ಡೆಗೆ ಅಧಿಕೃತ ರಸೀದಿ ನೀಡುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಹೋರಾಟಗಾರ ಹೊ.ತಿ. ಹುಚ್ಚೇಗೌಡ ಏಕಾಂಗಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಆರಣದಲ್ಲಿ ಬೆಳಗ್ಗಿನಿಂದ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರುಕಟ್ಟೆಯಲ್ಲಿ ವರ್ತಕರು ಬಿತ್ತನೆ ಆಲೂಗಡ್ಡೆ ಖರೀದಿ ಸಂದರ್ಭದಲ್ಲಿ ಅಧಿಕೃತ ಬಿಲ್ ನೀಡುತ್ತಿಲ್ಲ. ಇದರಿಂದ ರೈತರು ಬೆಳೆ ವಿಮೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಆರೋಪಿಸಿದರು.