ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರ್ಜಿ ಆಹ್ವಾನ

Rashmi Kasaragodu
Updated On : 14 May 2014, 12:59 pm

ಹಾಸನ: ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ವ್ಯಾಪ್ತಿಗೆ ಒಳಪಡುವ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ನೃತ್ಯ, ಕಥಾಕೀರ್ತನ ಮತ್ತು ಗಮಕ ಕಲಾಪ್ರಕಾರಗಳಿಗೆ ಸಂಬಂಧಿಸಿದಂತೆ, 18ರಿಂದ 30 ವಯೋವುತಿಗೆ ಒಳಪಡುವ ಯುವ ಕಲಾವಿದರಿಂದ ಸಂಕ್ಷಿಪ್ತ ಪರಿಚಯ ಹಾಗೂ ಭಾವಚಿತ್ರವನ್ನು ಒಳಗೊಂಡಂತೆ ಒಂದು ಪುಸ್ತಕ ಹೊರತರಲು ಅಕಾಡೆಮಿ ತೀರ್ಮಾನಿಸಿದೆ. ಮೇಲ್ಕಂಡಂತೆ ಅಕಾಡೆಮಿ ವ್ಯಾಪ್ತಿಗೆ ಒಳಪಡುವ ಕಲಾ ಪ್ರಕಾರಗಳಿಗೆ ಸಂಬಂಧಿಸಿದಂತೆ ಯುವ ಕಲಾವಿದರ ಹೆಸರು, ವಿಳಾಸ (ದೂರವಾಣಿ, ಮೊಬೈಲ್, ಇ- ಮೇಲ್ ಇದ್ದಲ್ಲಿ) ಜನ್ಮ ದಿನಾಂಕ (ಪ್ರಮಾಣ ಪತ್ರದೊಂದಿಗೆ), ಗುರುಗಳ ಹೆಸರು, ವಿಳಾಸ, ವಿದ್ಯಾರ್ಹತೆ, ಕಲಾ ಕ್ಷೇತ್ರದಲ್ಲಿ ಪಡೆದ ಅರ್ಹತೆ, ಅನುಭವ, ಸಾಧನೆ ಇತ್ಯಾದಿಗಳ ಬಗ್ಗೆ ಸಂಕ್ಷಿಪ್ತವಾಗಿ ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ, ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002, ದೂರವಾಣಿ 080-22215072 ಇಲ್ಲಿಗೆ ಮೇ 31 ರೊಳಗೆ  ಕಳುಹಿಸಿಕೊಡಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement