ಎಂಸಿಇನಲ್ಲಿ ವಿಶ್ವ ರೆಡ್ಕ್ರಾಸ್ ದಿನಾಚರಣೆ
ಹಾಸನ: ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಯುವ ರೆಡ್ಕ್ರಾಸ್ ಸಂಸ್ಥೆಯು ಇತ್ತೀಚೆಗೆ ವಿಶ್ವ ರೆಡ್ಕ್ರಾಸ್ ದಿನವನ್ನು ವಿದ್ಯಾಲಯದ ಅಲ್ಯುಮ್ನಿ ಹಾಲ್ನಲ್ಲಿ ಆಚರಿಸಿತು.
ಈ ಸಂದರ್ಭದಲ್ಲಿ ಹಾಸನದ ಬಾಲಕರ ಬಾಲಮಂದಿರದ ಅಧೀಕ್ಷಕ ಚನ್ನಬೈರೇಗೌಡ ಮಾತನಾಡಿ, ಬಾಲ ಮಂದಿರದ ಬಡ ಹಾಗೂ ಹಿಂದುಳಿದ ಮಕ್ಕಳ ಪರಿಸ್ಥಿತಿಯನ್ನು ವಿವರಿಸಿ, ಎಂ.ಸಿ.ಇ. ವಿದ್ಯಾರ್ಥಿಗಳು ರಕ್ತದಾನ ಮತ್ತು ಉದಾರ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಚ್.ಪಿ. ಮೋಹನ್ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕ ಸರ್ ಹೆನ್ರಿ ಡ್ಯುನಾನ್ಟ್ ಅವರ ಜನ್ಮದಿನದ ನೆನಪಿಗಾಗಿ ಈ ದಿನ ಆಚರಿಸುತ್ತಿದ್ದೇವೆ. ಅವರು, ರೆಡ್ ಕ್ರಾಸ್ ಸಂಸ್ಥೆಗಾಗಿ ಪಟ್ಟ ಪರಿಶ್ರಮಕ್ಕಾಗಿ ಅವ ರಿಗೆ ಶಾಂತಿಗಾಗಿ ನೋಬಲ್ ಪ್ರಶಸ್ತಿ ನೀಡಲಾಯಿತು ಎಂದರು. ಬಾಲಮಂದಿರಕ್ಕೆ ಒಂದು ಹೊಲಿಗೆ ಯಂತ್ರ ಮತ್ತು ಒಂದು ಮಿಕ್ಸರ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ವಿದ್ಯಾಲಯದ ಪ್ರಾಂಶುಪಾಲ ಡಾ. ಕೆ.ಎಸ್. ಜಯಂತ್ ರೆಡ್ಕ್ರಾಸ್ ಸಂಸ್ಥೆಯ ಸೇವೆಯನ್ನು ಪ್ರಶಂಸಿಸಿ, ಈ ದಿಕ್ಕಿ ನಲ್ಲಿ ವಿದ್ಯಾಲಯದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಉಪ ಪ್ರಾಂಶುಪಾಲ ಡಾ. ಎಂ. ಎಸ್. ರವಿಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಬಾಲಮಂದಿರಕ್ಕೆ ನೀಡಿದ ಕೊಡುಗೆ ಸ್ಮರಿಸಿದರು. ಹಾಸನ ಶಾಖೆಯ ರೆಡ್ ಕ್ರಾಸ್ಸ್ಂಸ್ಥೆಯ ಖಜಾಂಚಿ ಮಲ್ಲಿಕಾರ್ಜುನ, ಕಾರ್ಯಕ್ರಮ ನಿಯೋಜಕ ಡಾ. ಮೋಹನ್ ಕುಮಾರ್, ಚವಾಣ್ ಮತ್ತು ಪ್ರೊ. ನೀಲಕಂಠಪ್ಪ ಉಪಸ್ಥಿತರಿದ್ದರು. ಜೆ. ರಕ್ಷಿತಾ ಪ್ರಾರ್ಥಿಸಿದರು.
7 ಜೂಜುಕೋರರ ಬಂಧನ
ಅರಸೀಕೆರೆ: ತಾಲೂಕಿನ ಕಾಮಸಮುದ್ರದ ಸಮೀಪವಿರುವ ಯರೇನಹಳ್ಳಿ ಸರ್ಕಾರಿ ಹಳ್ಳದ ಹತ್ತಿರ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ 7 ಮಂದಿಯನ್ನು ಬಂಧಿಸಿರುವ ಪೊಲೀಸರು ರು. 11,050 ನಗದು ಮತ್ತು 6 ಮೊಬೈಲ್ಗಳನ್ನು ವಶಪಡಿಸಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ತಿಪಟೂರು ತಾಲೂಕಿನ ಹೂವಿನಹಳ್ಳಿ ಗ್ರಾಮದ ಶಬ್ಬೀರ್ (38), ಧನಂಜಯ (55), ಚಿದಾನಂದ (28), ಅರಸೀಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದ ಮಂಜುನಾಥ (30), ಮೋಹನ್ (32), ತಿಪಟೂರು ತಾಲೂಕು ಹೂವಿನಹಳ್ಳಿ ಗ್ರಾಮದ ಸತ್ಯನಾರಾಯಣ (45) ಹಾಗೂ ಪುಟ್ಟಸ್ವಾಮಿ (36) ಎಂಬವರು ಬಂಧಿತರು. ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ರು. 11,050 ನಗದು ಮತ್ತು 6 ಮೊಬೈಲ್ಗಳನ್ನು ವಶಪಡಿಸಿಕೊಂಡಿರುವ ಗ್ರಾಮಾಂತರ ಠಾಣೆ ಪ್ರಕರಣ ದಾಖಲಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.