ಎಸ್ಎಲ್ವಿ ಶಾಲೆಗೆ ಶೇ.100 ಫಲಿತಾಂಶ
ಹಾಸನ: ನಗರದ ವಿವೇಕಾ ನಗರದಲ್ಲಿರುವ ಎಸ್.ಎಲ್.ವಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಗಳಿಸಿಕೊಂಡಿದೆ. ಪರೀಕ್ಷೆಗೆ 20 ವಿದ್ಯಾರ್ಥಿಗಳು ಹಾಜರಿದ್ದು, ಅತ್ಯುನ್ನತ ಶ್ರೇಣಿಯಲ್ಲಿ 3, ಪ್ರಥಮ ಶ್ರೇಣಿಯಲ್ಲಿ 10, ದ್ವಿತೀಯ ಶ್ರೇಣಿಯಲ್ಲಿ 5, ತೃತೀಯ ಶ್ರೇಣಿಯಲ್ಲಿ 2 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ಹಾಸನ ತಾಲ್ಲೂಕಿನ ಬಸವಾ ಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ ಹಾಜರಿದ್ದ 50 ವಿದ್ಯಾರ್ಥಿಗಳಿದ್ದು, ಅದರಲ್ಲಿ 49 ಉತ್ತೀರ್ಣರಾಗಿದ್ದಾರೆ. ಶೇ. 98ರಷ್ಟು ಫಲಿತಾಂಶ ಬಂದಿದೆ. ಪ್ರಥಮ ದರ್ಜೆ 25, ದ್ವಿತೀಯ ದರ್ಜೆ 10, ತೃತೀಯ ದರ್ಜೆ 14, ಅನುತ್ತೀರ್ಣ ಒಂದು, ಶಾಲೆಯಲ್ಲಿ ಅತಿ ಹೆಚ್ಚಿನ ಅಂಕವನ್ನು ಶ್ವೇತಾ ಆರ್.ಪಿ., 527 ಅಂಕಗಳಿಸಿದ್ದಾರೆ. ಸಚಿನ್.ಬಿ.ಆರ್. 513 ಅಂಕ ಗಳಿಸಿ ಹೆಚ್ಚು ಕೀರ್ತಿ ತಂದಿದ್ದಾರೆ ಎಂದು ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.