ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಸ ವಿಲೇವಾರಿಗೆ ನಾಗರಿಕರ ಆಗ್ರಹ

Rashmi Kasaragodu
Updated On : 14 May 2014, 12:59 pm

ಕ.ಪ್ರ.ವಾರ್ತೆ    ಹಾಸನ    ಮೇ 13
ನಗರದ ಕಸವನ್ನು ನಗರದಿಂದ ಬೇರೆಡೆಗೆ ವಿಲೇವಾರಿ ಮಾಡುವಂತೆ ಆಗ್ರಹಿಸಿ ನಗರಸಭೆ ಆವರಣದಲ್ಲಿ ನಾಗರಿಕ ಹಿತಕ್ಷಣಾ ವೇಧಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಆಯುಕ್ತರ ಜೊತೆಗೆ ಮಾತಿನ ಚಕಮಕಿಯೂ ನಡೆಯಿತು.
ಕಸ ವಿಲೇವಾರಿ ಮಾಡುವಂತೆ ನಗರಸಭೆಗೆ ಹಲವು ಬಾರಿ ತಿಳಿದಿದ್ದರೂ ಪ್ರಯೋಜನವಾಗಿಲ್ಲ. ನಗರಸಭೆ ಸದಸ್ಯರು, ಆಯುಕ್ತರು ಸ್ವಾರ್ಥ ಇಚ್ಛಾಶಕ್ತಿಯಿಂದ ಸಭೆ ಒಳಗೆ ಕಿತ್ತಾಟ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ನಗರಸಭೆಯಿಂದ ಅಗಿಲೆ ಬೋರೆಯ ಮೇಲೆ 22 ಎಕರೆ ಭೂಮಿಯನ್ನು ಕಸವಿಲೇವಾರಿ ಮತ್ತು ಕಸವಿಂಗಡಣೆಗೆ ಖರೀದಿಸಿದೆ. ಈ ಸ್ಥಳಕ್ಕೆ ಕಸ ವಿಲೇವಾರಿ ಮಾಡದೆ ಲಕ್ಷಾಂತರ ರು. ಖರ್ಚು ಮಾಡಿ ವ್ಯರ್ಥ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ: ಜಿಲ್ಲಾ ಬಂಧೀಖಾನೆ ಹಿಂಭಾಗ ನಗರದ ತ್ಯಾಜ್ಯ ಸುರಿಯುತ್ತಿರುವುದರಿಂದ ಶ್ರೀನಗರ ಬಡಾವಣೆಯ ಜನತೆ ವಾಸಿಸಲು ಕಷ್ಟಕರವಾಗಿದೆ. ನಾನಾ ರೋಗಗಳಿಂದ ನರಳುತ್ತಿದ್ದಾರೆ ಮತ್ತು ಗೊರೂರು ರಸ್ತೆ ಬಳಿ ಇರುವ ಅಂಗಡಿ ಮಾಲೀಕರು, ವ್ಯಾಪಾರಸ್ಥರು ಮತ್ತು ಸುತ್ತಮುತ್ತಲ ಜನತೆ ಓಡಾಡಲು ಸಾಧ್ಯವಾಗದೇ, ಕಸದ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ಮೇ 25ರ ಒಳಗೆ ಕ್ರಮಕೈಗೊಳ್ಳಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು, ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ನಾಗರಿಕ ಹಿತರಕ್ಷಣಾ ವೇದಿಕೆ ಸಂಚಾಲಕ ಅಗಿಲೆ ಯೋಗೀಶ್, ನಗರಸಭೆ ಮಾಜಿ ಸದಸ್ಯೆ ಆಶಾ, ಸುರೇಶ್, ಕೃಷ್ಣಮೂರ್ತಿ, ಶೋಭನ್ ಬಾಬು, ಡಿ.ಕೆ. ಕುಮಾರಸ್ವಾಮಿ, ಶ್ರೀನಗರ ಯೋಗೀಶ್, ಜೈಕುಮಾರ್, ಪ್ರಕಾಶ್ ಹಾಗೂ ಇತರರು ಇದ್ದರು.



ಅಧ್ಯಕ್ಷೆ, ಉಪಾಧ್ಯಕ್ಷ, ಆಯುಕ್ತರ ಮಾತಿನ ಚಕಮಕಿ
ಸ್ಥಳಕ್ಕಾಗಮಿಸಿದ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್, ಉಪಾಧ್ಯಕ್ಷ ಇರ್ಷಾದ್ ಪಾಷ ಹಾಗೂ ಆಯುಕ್ತ ಕೃಷ್ಣಮೂರ್ತಿ ನಡುವೆ ಕಸ ವಿಲೇವಾರಿ ಬಗ್ಗೆ ಕೆಲ ಸಮಯ ಚರ್ಚೆ ನಡೆದು ಮಾತಿಗೆ ಮಾತು ನಡೆಯಿತು. ಅಧ್ಯಕ್ಷೆ ಶ್ರೀವಿದ್ಯಾ ಆನಂದ್ ಮಾತನಾಡಿ, ಗೊರೂರು ರಸ್ತೆಯ ಕಸ ವಿಲೆವಾರಿ ಬಗ್ಗೆ ಸಾರ್ವಜನಿಕರಿಂದ ಹಲವಾರು ಬಾರಿ ನಮಗೆ ದೂರುಗಳು ಬಂದಿದೆ. ಆರೋಗ್ಯ ನಿರೀಕ್ಷಕರು ಹಾಗೂ ಪೌರಾಯುಕ್ತರಿಗೆ ಸೂಚನೆ ನೀಡಿದರೂ ಇಲ್ಲಿಯವರೆಗೂ ಯಾವ ಕ್ರಮ ಕೈಗೊಂಡಿಲ್ಲ. ಅನೇಕ ಬಾರಿ ತಿಳಿಸಿದರೂ ಆಟೋ ಟಿಪ್ಪರ್ಗಳಿಗೆ ಚಾಲಕರು ಇಲ್ಲ ಎಂಬ ಕಾರಣ ಕೇಳಿ ಬರುತ್ತಿದೆ. ಕಸ ವಿಲೇವಾರಿ ಬಗ್ಗೆ ವಿಳಂಬವಾಗಿರುವುದರಿಂದ ಆಯುಕ್ತರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ವಿಚಾರ ಮೇಲಾಧಿಕಾರಿಗೆ ಶಿಫಾರಸು ಡುವುದಾಗಿ ಹೇಳಿದರು. ನಗರಸಭೆ ಆಯುಕ್ತ ಕೃಷ್ಣಮೂರ್ತಿ ಮಾತನಾಡಿ, ಕಸ ವಿಲೇವಾರಿ ಬಗ್ಗೆ ನಾನು ಎಂದು ಕಡೆಗಣಿಸಿಲ್ಲ. ಹೊಸ ಮಿಷನ್ ಬಿಡಿಭಾಗ ಬಂದಿದ್ದು, ಅವುಗಳನ್ನು ಜೋಡಿಸಿದ ಬಳಿಕ ಕೆಲಸ ಪ್ರಾರಂಭಿಸಲಾಗುವುದು. ಈ ತಿಂಗಳ 23ರೊಳಗೆ ಕಸದ ವಾಸನೆ ಬರದ ಆಗೇ ಔಷಧಿ ಸಿಂಪಡಿಸಲಾಗುವುದು. ಇಂದಿನಿಂದ ಒಂದು ತಿಂಗಳ ಒಳಗೆ ಕಸ ವಿಲೇವಾರಿ ಪ್ರಕ್ರಿಯೆ ಕಾರ್ಯ ಮಾಡಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement