ಕುಕ್ಕರ್ ಸಿಡಿದು ದಂಪತಿಗೆ ಗಾಯ
ಹಾಸನ: ಮನೆಯೊಂದರಲ್ಲಿ ಕುಕ್ಕರ್ ಸಿಡಿದು ದಂಪತಿ ಇಬ್ಬರಿಗೂ ಗಾಯಗಳಾದ ಘಟನೆ ಸೋಮವಾರ ನಡೆದಿದೆ.
ನಗರದ ಅರಳೇಪೇಟೆ ರಸ್ತೆ, ಎಚ್.ಆರ್. ನಾಗರಾಜ್ ಹಾಗೂ ಪತ್ನಿ ಸಾವಿತ್ರಿ ಗಾಯಗೊಂಡವರು.
ಬೆಳಗ್ಗೆ ಎಂದಿನಂತೆ ತಿಂಡಿ ಮಾಡಲು ಪತ್ನಿ ಮುಂದಾದಾಗ ಕುಕ್ಕರ್ ಸಿಡಿದಿದೆ. ಈ ವೇಳೆ ಅಲ್ಲೇ ಇದ್ದ ತನ್ನ ಹೆಂಡತಿಯನ್ನು ಪಕ್ಕಕ್ಕೆ ನೂಕಿ ರಕ್ಷಿಸಿದರೂ ನಾಗರಾಜ್ಗೆ ಎಡ ಕಣ್ಣಿನ ಬಳಿ ತೀವ್ರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಎಡ ಕಣ್ಣಿನ ಸುತ್ತ ಹಾಗೂ ಕಣ್ಣಿಗೆ ಬಿಸಿ ನೀರು ಬಿದ್ದು, ಗಾಯಗಳಾಗಿವೆ. ತಕ್ಷಣ ಸಿಲೆಂಡರ್ ಸ್ವಿಚ್ ಆಫ್ ಮಾಡಲಾಯಿತು.
ಕುಕ್ಕರ್ ಹಿಡಿದ ವೇಳೆ ಒಳಗೆ ಇದ್ದ ತಿಂಡಿ ಛಿದ್ರವಾಗಿ ಮನೆಯೊಳಗೆ ಹರಡಿತು. ಗ್ಯಾಸ್ ಸ್ಟವ್ ಮುರಿದು ಹೋಗಿದೆ.
ಒಬ್ಬನ ಬಂಧನ
ಅರಸೀಕೆರೆ: ತಾಲೂಕಿನ ಅರೆಕೆರೆ ಗ್ರಾಮದ ಉಮೇಶ ಎಂಬುವವರು ತಮ್ಮ ಅಂಗಡಿ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಜಾವಗಲ್ ಠಾಣೆಯ ಪಿಎಸ್ಐ ಸುನೀಲ್, ಸಿಬ್ಬಂದಿ ದಾಳಿ ನಡೆಸಿ, ಬಂಧಿಸಿದ್ದಾರೆ. ಮಾರಾಟಕ್ಕಿಟ್ಟಿದ್ದ ರು. 2990 ಬೆಲೆಯ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.