ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಡತನ ಬೇಗೆಯಲ್ಲಿ ಅರಳಿದ ಹೂವು

Rashmi Kasaragodu
Updated On : 14 May 2014, 1:00 am

ಆಲೂರು: ಅತ್ಯಂತ ಕಡು ಬಡ ಕುಟುಂಬದ ಹಾಗೂ ಕಾಡಾನೆ ಹಾವಳಿ ಪೀಡಿತ ಪ್ರದೇಶದ ಕುಗ್ರಾಮವೊಂದರ ಶಾಲಾ ವಿದ್ಯಾರ್ಥಿನಿಯೊಬ್ಬಳು ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಶೇ. 87.2 ಅಂಕಗಳನ್ನು ಗಳಿಸಿದ್ದಾಳೆ.
ತಾಲೂಕಿನ ಕಲ್ಲಾರೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಕೊಡಗತವಳ್ಳಿ ಗ್ರಾಮದ ಕೆ.ಕೆ. ಶೋಭ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿನಿ. ಈಕೆಯ ತಂದೆ ಕೆಂಪಣ್ಣ ಹಾಗೂ ತಾಯಿ ಮಂಜುಳ ವೃದ್ಧರಾಗಿದ್ದು ದುಡಿಯಲಾರದ ಸ್ಥಿತಿಯಲ್ಲಿದ್ದಾರೆ. ಈಕೆಗೆ ಸರ್ಕಾರಿ ಶಾಲೆಯಲ್ಲಿ ಅತ್ಯಂತ ಕಡಿಮೆ ಮೊತ್ತದ ಶಾಲಾ ಶುಲ್ಕ ಕಟ್ಟುವುದಿರಲಿ ಕನಿಷ್ಟ ಒಂದು ಪೆನ್ನನ್ನೂ ತೆಗೆದುಕೊಳ್ಳಲಾಗದ ಪರಿಸ್ಥಿತಿಯಿದ್ದು  ಆದರೂ ಸಹ ಈಕೆಯ ವಿದ್ಯಾಭ್ಯಾಸದೆಡೆಗಿನ ಆಸಕ್ತಿಯನ್ನು ಮನಗಂಡ ಶಾಲೆಯ ಶಿಕ್ಷಕರೇ ಕಳೆದ 3 ವರ್ಷಗಳಿಂದ ಈಕೆಯ ಶುಲ್ಕವನ್ನು ಭರಿಸಿದ್ದಾರೆ. ಇಷ್ಟೊಂದು ಬಡತನದ ನಡುವೆಯೂ ಓದಲೇಬೇಕೆಂಬ ಛಲದಿಂದ ಹಾಗೂ ಶಿಕ್ಷಕರ ಸಹಕಾರದಿಂದ ಈಕೆ ಒಟ್ಟು 545 ಅಂಕಗಳನ್ನು ಪಡೆದಿದ್ದು ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯಾದ ಈಕೆ ಇಂಗ್ಲೀಷ್ನಲ್ಲಿ 100ಕ್ಕೆ 96 ಅಂಕ ಪಡೆದಿದ್ದು ಕನ್ನಡದಲ್ಲೂ 125ಕ್ಕೆ 122 ಅಂಕಗಳನ್ನು ಪಡೆದಿದ್ದಾಳೆ. ಮುಂದೆ ಈಕೆ ಕಾಲೇಜು ಶಿಕ್ಷಣಕ್ಕೆ ಸೇರ ಬಯಸಿದ್ದು ಹಿಂದಿನ ಶಾಲೆಯ ಶಿಕ್ಷಕರಂತೆ ಮುಂದೆಯೂ ಯಾರಾದರೂ ಈಕೆಯ ಶಿಕ್ಷಣಕ್ಕೆ ಸಹಕಾರ ನೀಡಿದರೆ ಈಕೆ ಉನ್ನತ ವ್ಯಾಸಂಗ ಮಾಡಿ ಜಿಲ್ಲೆಗೆ ಕೀರ್ತಿ ತರುವುದರಲ್ಲಿ ಸಂದೇಹವೇ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement