ರೈತರ ಮಕ್ಕಳಿಗೆ ಉಚಿತ ತರಬೇತಿ
ಹಾಸನ: ಕೃಷ್ಣರಾಜಸಾಗರದ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2014-15ನೇ ಸಾಲಿನಲ್ಲಿ ರೈತ ಮಕ್ಕಳಿಗೆ 10 ತಿಂಗಳ ಉಚಿತ ತರಬೇತಿ ನೀಡಲಿದ್ದು, ಸದರಿ ತರಬೇತಿಗೆ ಹಾಸನ ಜಿಲ್ಲೆಯಿಂದ 7 ಜನ ಅರ್ಹ ಅಭ್ಯರ್ಥಿಗಳನ್ನು (ಸಾಮಾನ್ಯ-6 ಹಾಗೂ ಪರಿಶಿಷ್ಟ ಜಾತಿ-1) ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಹತ್ತನೇ ತರಬೇತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಹಾಗೂ ಸ್ವಂತ ಹೆಸರಿನಲ್ಲಿ ಅಥವಾ ತಂದೆ, ತಾಯಿ, ಪೋಷಕರ ಹೆಸರಿನಲ್ಲಿ ಜಮೀನನ್ನು ಹೊಂದಿದ್ದು ಸ್ವಂತ ಸಾಗುವಳಿ ಮಾಡುತ್ತಿರಬೇಕು. ಅರ್ಹ ರೈತ ಮಕ್ಕಳು ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ರಾಜ್ಯ ವಲಯ) ಹಾಸನ., ಇವರಿಂದ 2014ರ ಮೇ 14ರಿಂದ 24ರೊಳಗೆ ಸಲ್ಲಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿ ದೂರವಾಣಿ ಸಂಖ್ಯೆ 08172-234995 ಸಂಪರ್ಕಿಸಿ ಪಡೆಯಬಹುದಾಗಿದೆ.