ಸರ್ಕಾರಿ ಕಾಲೇಜಿನಲ್ಲಿ 56 ಮಂದಿ ಪಾಸ್
ಅರಸೀಕೆರೆ: ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 70 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಂಡಿದ್ದು ಈ ಪೈಕಿ 56 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.
ಶೇ. 80ರಷ್ಟು ಫಲಿತಾಂಶ ಲಭ್ಯವಾಗಿದೆ. ವಾಣಿಜ್ಯ ವಿಭಾಗದಲ್ಲಿ 35 ಮಂದಿ ಪರೀಕ್ಷೆ ಬರೆದಿದ್ದು 29 ಮಂದಿ ಉತ್ತೀರ್ಣರಾಗಿದ್ದು ಆ ಪೈಕಿ 18 ಪ್ರಥಮ, 6 ದ್ವಿತೀಯ, ಚೇತನ್ ಜಿ.ಎಂ. 527 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನದಲ್ಲಿದ್ದಾರೆ. ವಿಜ್ಞಾನ ವಿಭಾಗದಲ್ಲಿ 13 ಮಂದಿ ಪರೀಕ್ಷೆಗೆ ಕುಳಿತಿದ್ದು, 9 ಮಂದಿ ಉತ್ತೀರ್ಣರಾಗಿದ್ದು ಆ ಪೈಕಿ 6 ಪ್ರಥಮ, 3 ದ್ವಿತೀಯ, ಕಲಾ ವಿಭಾಗದಲ್ಲಿ 22 ಮಂದಿ ಪರೀಕ್ಷೆಗೆ ಹಾಜರಾಗಿದ್ದು 18 ಮಂದಿ ಪಾಸಾಗಿದ್ದು ಆ ಪೈಕಿ 7 ಪ್ರಥಮ, 5 ದ್ವಿತೀಯ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ.