ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಾಸನ ತಾಲೂಕಿಗೆ ಶೇ. 85.85 ಫಲಿತಾಂಶ

Rashmi Kasaragodu
Updated On : 14 May 2014, 12:59 pm

ಹಾಸನ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾಸನ ತಾಲೂಕಿಗೆ ಶೇ. 85.85 ಫಲಿತಾಂಶ ಬಂದಿದೆ. ಮೂರು ಸರ್ಕಾರಿ ಶಾಲೆ ಹಾಗೂ 12 ಅನುದಾನಿತ ರಹಿತ ಶಾಲೆಗಳು ಸೇರಿದಂತೆ ಒಟ್ಟು 15 ಪ್ರೌಢಶಾಲೆಗಳು ಶೇಕಡ ನೂರಷ್ಟು ಫಲಿತಾಂಶ ಪಡೆದಿವೆ ಎಂದು ಹಾಸನ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 47 ಸರ್ಕಾರಿ ಪ್ರೌಢಶಾಲೆಗಳ 935 ಬಾಲಕರು ಮತ್ತು 1072 ಬಾಲಕಿಯರು, 31 ಅನುದಾನಿತ ಪ್ರೌಢಶಾಲೆಗಳ 1089 ಬಾಲಕರು ಮತ್ತು 1334 ಬಾಲಕಿಯರು, 28 ಅನುದಾನರಹಿತ ಪ್ರೌಢಶಾಲೆಗಳ 758 ಬಾಲಕರು ಮತ್ತು 507 ಬಾಲಕಿಯರು ಸೇರಿದಂತೆ ಒಟ್ಟು 5695 ಮಕ್ಕಳು ಪರೀಕ್ಷೆಗೆ ಕುಳಿತಿದ್ದರು.
ಇವರಲ್ಲಿ 47 ಸರ್ಕಾರಿ ಪ್ರೌಡ ಶಾಲೆಗಳ 727 ಬಾಲಕರು ಮತ್ತು 892 ಬಾಲಕಿಯರು, 31 ಅನುದಾನಿತ ಪ್ರೌಢಶಾಲೆಗಳ 915 ಬಾಲಕರು ಮತ್ತು 1190 ಬಾಲಕಿಯರು, 28 ಅನುದಾನರಹಿತ ಪ್ರೌಢಶಾಲೆಗಳ 477 ಬಾಲಕರು ಮತ್ತು 1165 ಬಾಲಕಿಯರು ಸೇರಿದಂತೆ ಒಟ್ಟು 4889 ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಉತ್ತೀರ್ಣರಾದ ಒಟ್ಟು 4889 ಮಕ್ಕಳಲ್ಲಿ 495 ಡಿಸ್ಟಿಂಕ್ಷನ್, 1752 ಪ್ರಥಮ, 1037 ದ್ವಿತೀಯ, 1605 ತೃತೀಯ ವರ್ಗದಲ್ಲಿ ತೇರ್ಗಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಶೇ. 100 ಫಲಿತಾಂಶ ಪಡೆದ ಶಾಲೆಗಳು: ಸರ್ಕಾರಿ ಪ್ರೌಢಶಾಲೆ, ಗೋಪನಹಳ್ಳಿ, ಸರ್ಕಾರಿ ಪ್ರೌಢಶಾಲೆ ಅಗಲಹಳ್ಳಿ, ಮೊರಾರ್ಜಿ ದೇಸಾಯಿ ಪ್ರೌಡಶಾಲೆ ಮೊಸಳೆ ಹೊಸಹಳ್ಳಿ, ಹಾಸನದ ಯುನೈಟೆಡ್ ಪ್ರೌಢಶಾಲೆ, ಆಕ್ಸ್ಫರ್ಡ್ ಆಂಗ್ಲ ಪ್ರೌಢಶಾಲೆ, ಮಾಳವಿಕ ಪ್ರೌಡಶಾಲೆ, ಶ್ರೀ ಅದಿಚುಂಚನಗಿರಿ ಆಂಗ್ ಮಾಧ್ಯಮ ಪ್ರೌಡಶಾಲೆ, ರಾಮಕೃಷ್ಣ ವಿದ್ಯಾಲಯ, ಆ್ಯಂಗ್ ಪ್ರೌಢಶಾಲೆ, ವಾಸವಿ ಪ್ರೌಡಶಾಲೆ, ಶ್ರೀ ಲಕ್ಷ್ಮೀ ಪ್ರೌಡಶಾಲೆ, ರಾಯಲ್ ಅಪೊಲೋ ಪ್ರೌಡಶಾಲೆ, ಹೊಲಿ ಕ್ರಾಸ್ಪೌಡಶಾಲೆ, ಹಾಸನ ತಾಲ್ಲೂಕಿನ ಕಂಚಮಾರನಹಳ್ಳಿಯ ಶ್ರೀ ರಂಗನಾಥ ಪ್ರೌಢಶಾಲೆ, ಚಿಕ್ಕಮಂಡಿಗನ ಹಳ್ಳಿಯ ಎಸ್.ವಿ.ಎಂ. ಪ್ರೌಢಶಾಲೆ. ಬೊಮ್ಮನಾಯ್ಕನಹಳ್ಳಿಯ ಸಗೇಶ್ ಅಕಾಡೆಮಿ ಪ್ರೌಢಶಾಲೆ ಶೇಕಡಾ ನೂರರಷ್ಟು ಫಲಿತಾಂಶ ಪಡೆದಿವೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement