ಅರಸೀಕೆರೆ ತಾಲೂಕಿಗೆ ಶೇ. 89.08 ಫಲಿತಾಂಶ
ಅರಸೀಕೆರೆ: 2014ರ ಏಪ್ರಿಲ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು ಜಿಲ್ಲೆಯಲ್ಲಿ ಅರಸೀಕೆರೆ ತಾಲೂಕು 89.08 ಫಲಿತಾಂಶ ದಾಖಲಿಸುವ ಮೂಲಕ 3ನೇ ಸ್ಥಾನ ಪಡೆದುಕೊಂಡಿದೆ.
ತಾಲೂಕಿನಲ್ಲಿ ಒಟ್ಟು 3828 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ 3410 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 1929 ಬಾಲಕರು ಹಾಗೂ 1899 ಬಾಲಕಿಯರು ಪರೀಕ್ಷೆ ಬರೆದಿದ್ದು ಉತ್ತೀರ್ಣರಾದವರಲ್ಲಿ 1691 ಬಾಲಕರು ಹಾಗೂ 1719 ಬಾಲಕಿಯರು. 210 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಬಂದಿದ್ದು, 1513 ಪ್ರಥಮ ದರ್ಜೆ, 768 ದ್ವಿತೀಯ ದರ್ಜೆ ಹಾಗೂ 919 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ.
ಶೇ. 100 ಫಲಿತಾಂಶ: 34 ಸರ್ಕಾರಿ ಪ್ರೌಢಶಾಲೆಗಳ ಪೈಕಿ 9 ಸರ್ಕಾರಿ ಪ್ರೌಢಶಾಲೆಗಳು 100ಕ್ಕೆ 100ರಷ್ಟು ಫಲಿತಾಂಶ ಪಡೆದಿದ್ದು, 41 ಅನುದಾನಿತ ಪ್ರೌಢಶಾಲೆಗಳ ಪೈಕಿ 6 ಪ್ರೌಢಶಾಲೆಗಳು ಹಾಗೂ 9 ಅನುದಾನ ರಹಿತ ಶಾಲೆಗಳ ಪೈಕಿ 6 ಶಾಲೆಗಳು 100ಕ್ಕೆ 100ರಷ್ಟು ಫಲಿತಾಂಶ ಪಡೆದಿವೆ.
ಶೇ. 100 ಫಲಿತಾಂಶ ಪಡೆದ ಸರ್ಕಾರಿ ಪ್ರೌಢಶಾಲೆಗಳಲ್ಲಿ, ಬೆಳಗುಂಬ, ಜೆ.ಸಿ.ಪುರ, ಮುದುಡಿ, ಚಗಚಗೆರೆ, ಬಾಚೇನಹಳ್ಳಿ, ಬೆಲವತ್ತಹಳ್ಳಿ, ಚಲ್ಲಾಪುರ, ಮುರಾರ್ಜಿ ಶಾಲೆ ರಂಗಾಪುರ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಪ್ರೌಢಶಾಲೆ ಸೇರಿವೆ.
ಅನುದಾನಿತ ಖಾಸಗಿ ಶಾಲೆಗಳ ಪೈಕಿ ನವಭಾರತ ಪ್ರೌಢಶಾಲೆ ಬಾಗೀವಾಳು, ಗಂಡಸಿ ಶಂಭುಲಿಂಗೇಶ್ವರ, ಅಗ್ಗುಂದ ಎ.ವಿ.ಎಸ್, ಬೆಂಡೇಕೆರೆ ಶಿಖರಣ್ಣ, ರಂಗನಾಯಕನಕೊಪ್ಪಲು ಮಹದೇಶ್ವರ, ತಳಲೂರು ಚಿತ್ರಲಿಂಗೇಶ್ವರ ಪ್ರೌಢಶಾಲೆ ಶೇ 100 ಫಲಿತಾಂಶ ಪಡೆದಿವೆ. ಇನ್ನುಳಿದಂತೆ ಅನುದಾನ ರಹಿತ ಪ್ರೌಢಶಾಲೆಗಳಾದ ಶಾರದ ಪ್ರೌಢಶಾಲೆ, ಆದಿಚುಂಚನಗಿರಿ ಪ್ರೌಢಶಾಲೆ, ಎಸ್.ಎನ್.ಎಸ್‌ಡಿ.ಎಂ. ಕುರ್ಕೆ ಪ್ರೌಢಶಾಲೆ, ವಿದ್ಯಾನಿಕೇತನ ಪ್ರೌಢಶಾಲೆ ಬಾಣಾವರ, ಅನಂತ ಇಂಟರ್ ನ್ಯಾಷನಲ್ ಶಾಲೆ ಹಾಗೂ ಮಾಡೆಲ್ ಪ್ರೌಢಶಾಲೆ ಜಾವಗಲ್ ಶೇ. 100 ಫಲಿತಾಂಶ ಪಡೆದಿವೆ.
ಪಟ್ಟಣದ ಶಾಲೆಗಳ ಪೈಕಿ ಶಾರದ ಪ್ರೌಢಶಾಲೆ 100ಕ್ಕೆ 100ರಷ್ಟು ಫಲಿತಾಂಶ ಪಡೆದಿದೆ.
ಆದಿಚಂಚನಗಿರಿ ಪ್ರೌಢಶಾಲೆಯಲ್ಲಿ 120 ಮಂದಿ ಪರೀಕ್ಷೆಗೆ ಕುಳಿತಿದ್ದು, ಅದರಲ್ಲಿ 31 ಉನ್ನತ, 80 ಪ್ರಥಮ, 8 ದ್ವಿತೀಯ ಹಾಗೂ ಒಬ್ಬರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅನಂತ ಇಂಟರ್ ನ್ಯಾಷನಲ್ ಶಾಲೆಯಲ್ಲಿ, 7 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 1 ಮಂದಿ ಉನ್ನತ ಶ್ರೇಣಿಯಲ್ಲಿ 4 ಮಂದಿ ಪ್ರಥಮ 2 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ನಿವೇದಿತ ಶಾಲೆಯಲ್ಲಿ 61 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 60 ವಿದ್ಯಾರ್ಥಿಗಳು ಉತ್ತೀರ್ಣರಾಗಿ 98.36 ಫಲಿತಾಂಶ ಬಂದಿದ್ದು 3 ಮಂದಿ ಉನ್ನತ ಶ್ರೇಣಿಯಲ್ಲಿ 30 ಮಂದಿ ಪ್ರಥಮ 16 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ರೋಟರಿ ಪ್ರೌಢಶಾಲೆ 39 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 38 ವಿದ್ಯಾರ್ಥಿಗಳು ಉತ್ತೀರ್ಣರಾಗಿ 97.44 ಫಲಿತಾಂಶ ಬಂದಿದೆ. ಸಂತಮೇರಿ ಪ್ರೌಢಶಾಲೆಯಲ್ಲಿ ಒಟ್ಟು 159 ಮಂದಿ ಪರೀಕ್ಷೆಗೆ ಕುಳಿತ್ತಿದ್ದು 147 ಮಂದಿ ಉತ್ತೀರ್ಣರಾಗಿದ್ದು ಶೇ 92.45ರಷ್ಟು ಫಲಿತಾಂಶ ಲಭ್ಯವಾಗಿದೆ. ಬಾಣಾವರ ವಿದ್ಯಾನಿಕೇತನ ಶಾಲೆಯ 31 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು 31 ಮಂದಿ ತೇರ್ಗಡೆಯಾಗಿದ್ದಾರೆ. ಆ ಪೈಕಿ 5 ಉನ್ನತ ಶ್ರೇಣಿಯಲ್ಲಿ 22 ಮಂದಿ ಪ್ರಥಮ 3 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಜಾವಗಲ್ ವಾರ್ಡನ್ ಶಾಲೆಯ 33 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು 33 ಮಂದಿ ತೇರ್ಗಡೆಯಾಗಿದ್ದಾರೆ. ಆ ಪೈಕಿ 14 ಉನ್ನತ ಶ್ರೇಣಿಯಲ್ಲಿ 19 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಸರ್ಕಾರಿ ಗೌರಮ್ಮ ಪದವಿಪೂರ್ವ ಕಾಲೇಜು ಶೇ. 42 ಫಲಿತಾಂಶ ದಾಖಲಿಸುವ ಮೂಲಕ ಕಳಪೆ ಸಾಧನೆ ತೋರಿದ ಪ್ರೌಢಶಾಲೆಯಾಗಿದೆ.
ಸಂತಮೇರಿ ಪ್ರೌಢಶಾಲೆಯ ಜಿ. ರಕ್ಷಾ 625 ಅಂಕಗಳಿಗೆ 605 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದಿದ್ದರೆ, ಎಸ್. ರಕ್ಷಾ 596 ಅಂಕ ಪಡೆದಿದ್ದಾರೆ. ತಾಲ್ಲೂಕಿನ ಕಲ್ಲುಸಾದರಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರಂಜಿತಾ ಎಸ್.ಆರ್. ಕನ್ನಡ ಭಾಷಾ ವಿಷಯದಲ್ಲಿ 125 ಅಂಕಗಳಿಗೆ 125 ಅಂಕ ಗಳಿಸಿ ಉತ್ತಮ ಸಾಧನೆ ತೋರಿದ್ದಾರೆ.